ಹಳೆಯಂಗಡಿ (www.vknews.com) : ಮುಹಿದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು (ರಿ ) ಇದರ ಆಧೀನದಲ್ಲಿರುವ ‘ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ’ ಇದರ ಆಡಳಿತ ಕಮಿಟಿಯ ನೂತನ ಅಧ್ಯಕ್ಷರಾಗಿ “ಅಝೀಝ್ ಐ.ಎ.ಕೆ” ಆಯ್ಕೆಯಾದ್ದಾರೆ.
ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಸಂಸ್ಥೆಯ ಕಟ್ಟಡದಲ್ಲಿ ನಡೆದ ಕಮಿಟಿಯ 2020-21 ನೇ ಸಾಲಿನ ಪದಾಧಿಕಾರಿಗಳ ಸಭೆಯು, ಮುಹಿದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಅಧ್ಯಕ್ಷ ರಾದ ಬಿ.ಎಂ. ಇಬ್ರಾಹಿಂ ಇವರ ಅಧ್ಯಕ್ಷತೆ ಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಯೂಸುಫ್ ಪದ್ಮನೂರು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಇಂದಿರಾನಗರ, ಜೊತೆ ಕಾರ್ಯದರ್ಶಿಗಳು ಬಿ.ಎಂ ಅಬ್ದುಲ್ ರಹ್ಮಾನ್ ಹಾಗು ಅಹ್ಮದ್ ಬಾವಾ ಮದನಿ, ಲೆಕ್ಕ ಪರಿಶೊದಕರು ಬಿ.ಎಂ.ಸುಲೈಮಾನ್ ಹಾಗು ಇತರರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.