ಜೆದ್ದಾ(www.vknews.in): ಕೊರೊನಾ ವೈರಸ್ ಸಂಕ್ರಾಮಿಕ ರೋಗ ಹರಡುತ್ತಿರುವ ಪ್ರಸಕ್ತ ಸಾಲಿನ ಹಜ್ ನೆರವೇರಿಸುವವರಿಗಾಗಿ ಸೌದಿ ಹಜ್ ಮಂತ್ರಾಲಯವು ಹಜ್ ಕರ್ಮದ ನಿಭಂದನೆಗಳನ್ನು ಪ್ರಕಟಿಸಿದ್ದು, ಅವುಗಳು ಈ ಕೆಳಗಿನಂತಿವೆ:
1. ಹಜ್ ತೀರ್ಥಯಾತ್ರೆ ಮಾಡಲು 10,000 ಕ್ಕೂ ಹೆಚ್ಚು ಜನರಿಗೆ ಅವಕಾಶ ನೀಡಲಾಗುವುದಿಲ್ಲ. 2. ಎಲ್ಲಾ ಯಾತ್ರಿಕರನ್ನು ಹಜ್ ಕರ್ಮಕ್ಕೆ ತೆರಳುವ ಮೊದಲು ಕೊವಿಡ್ ಪರೀಕ್ಷೆ ನಡೆಸಲಾಗುವುದು. 3. 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಈ ವರ್ಷ ಹಜ್ ಮಾಡಲು ಅವಕಾಶವಿರುತ್ತದೆ. 4. ಎಲ್ಲಾ ಯಾತ್ರಾರ್ಥಿಗಳು ಹಜ್ಜಾಜ್ ಗಳನ್ನು ಹಜ್ ಕರ್ಮ ಪೂರ್ತಿಗೊಳಿಸಿದ ನಂತರ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ.. 5. ಹಜ್ ತೀರ್ಥಯಾತ್ರೆ ಪ್ರಾರಂಭವಾಗುವ ಮೊದಲು ಎಲ್ಲಾ ಹಜ್ ಕಾರ್ಮಿಕರು ಮತ್ತು ಸ್ವಯಂಸೇವಕರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 6. ಎಲ್ಲಾ ಯಾತ್ರಿಕರ ಆರೋಗ್ಯ ಸ್ಥಿತಿಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುತ್ತದೆ. 7. ತೀರ್ಥಯಾತ್ರೆಯಲ್ಲಿ ಸಂಭವಿಸುವ ಯಾವುದೇ ತುರ್ತು ಪರಿಸ್ಥಿತಿಗಾಗಿ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. 8. ಹಜ್ ಕರ್ಮದಲ್ಲಿ ಸಾಮಾಜಿಕ ಅಂತರ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.