ಯುಎಇ(ವಿಶ್ವ ಕನ್ನಡಿಗ ನ್ಯೂಸ್):ವಿದೇಶದಿಂದ ಆಗಮಿಸುವ ಪ್ರವಾಸಿಗಳು ಊರಿನಿಂದ ಮರಳುವ ಮೊದಲು ಕೋವಿಡ್-೧೯ ಆರ್.ಟಿ-ಪಿಸಿಆರ್(ರಿವರ್ಸ್ ಟ್ರಾನ್ಸ್ ಕ್ರಿಪ್ಷನ್ ಪೋಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಯನ್ನು ಪ್ರಯಾಣದ 48 ರಿಂದ 72 ಗಂಟೆಗಳ ಮೊದಲು ಮಾಡುವುದನ್ನು ಎನ್.ಸಿ.ಇ.ಎಮ್.ಎ(ನ್ಯಾಷನಲ್ ಕ್ರೈಸಿಸ್ ಆಂಡ್ ಎಮೆರ್ಜನ್ಸಿ ಮ್ಯಾನೇಜ್ಮೆಂಟ್) ಹಾಗು ಆರೋಗ್ಯ ಜಂಟಿಯಾಗಿ ಕಡ್ಡಾಯಗೊಳಿಸಿದೆ.ಜೊತೆಗೆ ಯು.ಎ.ಇ ತಲುಪಿದ ಬಳಿಕ 14 ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ಅನುಸರಿಸಬೇಕಾಗಿದೆ(ದುಬೈ ಪ್ರಯಾಣಿಕರಿಗೆ ಪಾಸಿಟಿವ್ ಬಂದಲ್ಲಿ ಮಾತ್ರ ಕ್ವಾರಂಟೈನ್ ಕಡ್ಡಾಯ).ಕ್ವಾರಂಟೈನ್ ನಿಯಮ ಉಲ್ಲಂಘನೆಯು ಐವತ್ತು ಸಾವಿರ ದಿರ್ಹಂ ವರೆಗಿನ ದಂಡಕ್ಕೆ ಕಾರಣವಾಗಬಹುದು ಎಂದು ಪ್ರಾಧಿಕಾರ ಎಚ್ಚರಿಸಿದೆ. ಮನೆಯಲ್ಲೇ ಕ್ವಾರಂಟೈನ್ ಇರುವುದು ಹೇಗೆ ಎಂಬ ಮಾರ್ಗದರ್ಶಿಯನ್ನು ಯು.ಎ.ಇ ಆರೋಗ್ಯ ಪ್ರಾಧಿಕಾರ ಬಿಡುಗಡೆ ಮಾಡಿದೆ. -ಮನೆಯಲ್ಲಿ ಇತರರಿಂದ ಬೇರ್ಪಟ್ಟಿರುವುದು -ಈ ಅವಧಿಯಲ್ಲಿ ಮನೆಗೆ ಯಾವುದೇ ಅತಿಥಿಗಳನ್ನು ಅಥವಾ ಸಂದರ್ಶಕರನ್ನು ಆಹ್ವಾನಿಸದಿರುವುದು -ಮನೆಯಲ್ಲೇ ಉಳಿದುಕೊಳ್ಳುವುದು ಹಾಗು ಕೆಲಸಕ್ಕೆ,ಶಾಲೆಗೆ ಯಾ ಸಾರ್ವಜನಿಕ ಸ್ಥಳಗಳ ಭೇಟಿ ನಡೆಸದಿರುವುದು. -ಸಾರ್ವಜನಿಕ ಟ್ಯಾಕ್ಸಿ ಅಥವಾ ಸಾರಿಗೆಯನ್ನು ಬಳಸದಿರುವುದು. -ವಾಸವಿರುವ ಕೋಣೆಯನ್ನು ಮುಚ್ಚಿಡುವುದು,ಸರಿಯಾದ ಗಾಳಿಯ ಲಭ್ಯತೆ ಸ್ಥಿರೀಕರಿಸುವುದು. -ಮನೆಯಲ್ಲಿ ಇತರರು ಇದ್ದಲ್ಲಿ ಆಗಾಗ್ಗೆ ಸ್ಯಾನಿಟೈಝರ್ ಬಳಕೆ,ಪ್ರತ್ಯೇಕ ಸ್ನಾನಕೋಣೆ ಮತ್ತು ಶೌಚಾಲಯ ಬಳಸುವುದು,ಊಟದ ತಟ್ಟೆ -ಸ್ನಾನದ ಟವೆಲ್ ಮೊದಲಾದುವುಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವಲ್ಲಿ ಸೂಕ್ಷ್ಮತೆ ವಹಿಸುವುದು. -ಆನ್ಲೈನ್ ಡೆಲಿವರಿ -ಕೈಗಳನ್ನು ಕನಿಷ್ಠ ೨೦ ಸೆಕೆಂಡುಗಳ ಕಾಲ ತೊಳೆಯಿರಿ,ಶುಚಿತ್ವ ಸದಾ ಕಾಪಾಡುವುದು -ಕೆಮ್ಮುವಾಗ ಅಥವಾ ಸೀನುವಾಗ ಮುಖ ಗವಚ ಅಥವಾ ಟಿಷ್ಯು ಪೇಪರ್ ಬಳಸಿ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ನಡೆಸುವುದು -ಯಾವುದಾದರೂ ಲಕ್ಷಣಗಳು(ಉಸಿರಾಟದಲ್ಲಿ ತೊಂದರೆ,ಜ್ವರ,ಗಂಟಲು ನೋವು,ತಲೆನೋವು,ಕೆಮ್ಮು) ಕಂಡು ಬಂದರೆ ಕೂಡಲೇ ವೈದ್ಯಕೀಯ ಸಹಾಯ ಪಡೆಯಿರಿ. -ಉತ್ತಮ ಆಹಾರ ಉಪಯೋಗಿಸುವುದು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.