(www.vknews.com) : ಎಸ್ಸೆಸ್ಸೆಫ್ ಮಾಡನ್ನೂರು ಶಾಖಾ ಮಹಾಸಭೆಯು ದಿನಾಂಕ 17-12-2020 ಗುರುವಾರದಂದು ಸಲೀಂ ಮಾಡನ್ನೂರು ರವರ ಅಧ್ಯಕ್ಷತೆಯಲ್ಲಿ ಕಾವು ಮಸ್ಜಿದುನ್ನಈಂ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಎಸ್.ವೈ.ಎಸ್.ನಾಯಕರಾದ ಅಬ್ದುಲ್ಲ ಅಹ್ಸನಿ ಯವರು ದುಆ ದ ಮೂಲಕ ಆಶಿರ್ವದಿಸಿದರು.ರಿಯಾಝ್ ಕಾವು ಸ್ವಾಗತಿಸಿದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ದಅ್ವಾ ಕನ್ವೀನರಾದ ಹುಸೈನ್ ಜೌಹರಿ ಈಶ್ವರಮಂಗಳ ಕಾರ್ಯಕ್ರಮವನ್ನು ಜಗದೊಡೆಯನ ನಾಮದಿಂದ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಬಂದಂತಹ ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ ಪಮ್ಮಲೆ ಸಂಘಟನೆಯ ಮಹತ್ವದ ಕುರಿತು ತರಗತಿ ನಡೆಸಿದರು. ಸಮಿತಿಯ ನೂತನ ಸಾರಥಿಗಳು:- ಅಧ್ಯಕ್ಷರಾಗಿ ಮುನೀರ್ ಲತೀಫಿ ಮಾಡನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ನೌಫಾನ್ ಕಾವು ಹಾಗೂ ಕೋಶಾಧಿಕಾರಿಯಾಗಿ ಸಿರಾಜ್.M.A. ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಾಫಿಳ್ ಇಲ್ಯಾಸ್ ಸಖಾಫಿ ಮತ್ತು ಇರ್ಫಾನ್ ಮಾಡನ್ನೂರು ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಮಿಸ್ಹಬ್,ಸೆಲೀತ್ ಕಾವು ರವರನ್ನು ಆಯ್ಕೆ ಮಾಡಲಾಯಿತು.ದಅ್ವಾ ಕನ್ವೀನರಾಗಿ ರಿಯಾಝ್ ಕಾವು ಹಾಗೂ ಕ್ಯಾಂಪಸ್ ಕಾರ್ಯದರ್ಶಿಯಾಗಿ ಶರ್ವಾನ್ ಕಾವು ರವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮೀರ್.ಬಿ.ಎಂ.,ಶಾಫಿ ಮಾಡನ್ನೂರು, ಸುಹೈಲ್ ಮಾಡನ್ನೂರು, ಬಾಸಿತ್ ಕಾವು,ಸಿಮಾಕ್ ಹಾಗೂ ಶಾಹಿಮ್ ರವರನ್ನು ಅಯ್ಕೆ ಮಾಡಲಾಯಿತು.
ಸಭೆಯಲ್ಲಿ ಎಸ್.ವೈ.ಎಸ್.ನಾಯಕರಾದ ಅಬ್ದುಲ್ಲ ಅಹ್ಸನಿ ಯವರು ಶುಭಹಾರೈಸಿದರು.ನೂತನ ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಮಾತನಾಡಿದರು.ಕೊನೆಯಲ್ಲಿ ನೂತನ ಕಾರ್ಯದರ್ಶಿ ನೌಫಾನ್ ಕಾವು ಧನ್ಯವಾದ ಸಮರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.