(www.vknews.com) : ಬೆಳಿಗ್ಗೆ ವಾಟ್ಸಪ್ ನೋಡಬೇಕಾದರೆ ಏನೋ ವಾಟ್ಸಪಿನಲ್ಲಿ, ವಾಟ್ಸಪ್ ಎಂಬ ಹೆಸರಿನೊಂದಿಗೆ ಆಫೀಷಿಯಲ್ ಆದ ಸ್ಟೇಟಸ್ ಕಾಣಸಿಕ್ಕಿತ್ತು. ಕೆಲವರಿಗೆ ಇದೂ ಶಾಕ್ ಆಗಿರಬಹುದು, ಏನಪ್ಪಾ ಇದು ಒಂದು ಹೊಸ ಸ್ಟೇಟಸ್ ಅಂತಾ..! ಇನ್ನೂ ಕೆಲವರಿಗೆ ಇದರ ವಿಚಾರ ತಿಳಿದರಿಂದ ಸುಮ್ಮನಾಗಿರಬಹುದು. ಹೇಗೆ ಇರಲಿ ನನ್ನ ಸಂಭಂಧಿಕರು ಏನೂ ಇದು ? ನಿನ್ನಲ್ಲಿ ಕೂಡ ಇದೇಯೆ ? ಎಂದು 2-3 ಮಂದಿ ವಿಚಾರಿಸಿದಾಗ ಇದನ್ನು ಬರಿಯಬೇಕೆನಿಸಿತ್ತು.
ಹೆದರುವಂತಹ ಅವಶ್ಯಕತೆ ಏನು ಕೂಡ ಬಂದಿಲ್ಲ. ಇದು ಹೀಗೆಕೆ ಎಂದರೆ ಉತ್ತರ ಇಲ್ಲಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ವಾಟ್ಸಪ್ ಪರದೆಯ ಮೇಲೆ ಒಂದು ವಾಟ್ಸಪ್ ಗೌಪ್ಯತಾ ನೀತಿ ಬಗ್ಗೆ AGREE ಕೊಡುವಂತಹ ಮೆಸೇಜ್ ಬರುತ್ತಿರುವುದನ್ನು ಕಂಡಿರಬಹುದು, ಕೆಲವರು AGREE ಕೊಟ್ಟಿರಬಹುದು. ಏನೆಂದರೆ ಇದು ವಾಟ್ಸಪ್ ನ್ನು ವರ್ಷಗಳ ಹಿಂದೆಯೇ ಬರೋಬ್ಬರಿ ದೊಡ್ಡ ಮೊತ್ತವನ್ನು ನೀಡಿ ಫೇಸ್ ಬುಕ್ ಖರೀದಿಸಿತ್ತು. ಇದು ಬಿಸಿನೆಸ್ ಮತ್ತು ವಹಿವಾಟಿಗಳಲ್ಲಿ ಹೆಜ್ಜೆಯನ್ನು ಮುಂದಿಡುತ್ತಾ ಬಂದಿತ್ತು ಅವುಗಳಲ್ಲಿ ಒಂದು ಹಂತವು ಇದಾಗಿದೆ. ಇದು ಫೇಸ್ ಬುಕ್ ನೊಂದಿಗೆ ನಮ್ಮ ವಾಟ್ಸಪ್ ಗೌಪ್ಯತಾವನ್ನು ಹಂಚಿಕೊಳ್ಳುವುದಾಗಿದೆ. ಇದು ಕೆಲವರಿಗೆ ( ಬಿಸಿನೆಸ್ ಮಾಡುವವರಿಗೆ) ಉಪಕಾರವಾದರೆ ಉಳಿದವರಿಗೆ ತನ್ನ ಮನೆಯ ಕೀಯನ್ನು ಕಳ್ಳನ ಕೈಯಲ್ಲಿ ನೀಡುವಂತಹ ರೀತಿ ಎನಿಸರಬಹುದು. ಆದಾಗಿಯೂ ಯಾರು ಫೆಬ್ರವರಿ 8ರ ಮುಂಚಿತವಾಗಿ AGREE ಮಾಡುವುದಿಲ್ಲವೊ ಅವರ ವಾಟ್ಸಪ್ ತೆರೆಯುದಿಲ್ಲವೆಂದು ತಿಳಿಸಿರುತ್ತದೆ. ಇನ್ನೂ ಒಂದು ವೇಳೆ ನಾವು AGREE ಕೊಟ್ಟು ವಾಟ್ಸಪ್ ಯೂಸ್ ಮಾಡಿದರೆ ನಮ್ಮಲ್ಲಿರುವಂತಹ ಎಲ್ಲಾ ವಾಟ್ಸಪ್ ಮಾಹಿತಿಗಳು ಪ್ರೊಫೈಲ್ ಫೋಟೋ ಸಮೇತ ಎಲ್ಲಾ ಮಾಹಿತಿಗಳು ಕೂಡ ಫೇಸ್ಬುಕ್ ಜೊತೆ ಹಂಚಿಕೊಳ್ಳುತ್ತದೆ. ಇದರ ವಿರುದ್ಧವಾಗಿ ಇಡೀ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮಂದಿಗಳು ವಾಟ್ಸಪ್ ಮಾಲೀಕರಲ್ಲಿ ಕಿಡಿಗಾರಿದ್ದು, ಅದಲ್ಲದೇ ಗೌಪ್ಯತಾ ದೃಷ್ಟಿಯಿಂದ ಸಿಗ್ನಲ್ ಮತ್ತು ಟೆಲಿಗ್ರಾಂ ಜೊತೆ ವಾಲಿದ್ದಾರೆ.
ಇದನ್ನು ಕಂಡು ವಾಟ್ಸಪ್ ಮತ್ತೆ ಎಚ್ಚರ ವಹಿಸಿದೆ, ನಿನ್ನೆಯ ದಿನ ವಾಟ್ಸಪ್ ಯಾವುದೇ ರೀತಿಯ ತನ್ನ ವೈಯಕ್ತಿಕ ವಿಚಾರಗಳನ್ನು ಫೇಸ್ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ ಅದನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಇದನ್ನು ಗಮನಿಸದ ಜನರು ಹೆಚ್ಚೆಚ್ಚು ಜನರು ಸಿಗ್ನಲ್ ಡೌನ್ಲೋಡ್ ಮಾಡುತ್ತಿದ್ದು, ನಂ1 ಚಾಟಿಂಗ್ ಅಪ್ಲಿಕೇಶನ್ ಸ್ಥಾನದಲ್ಲಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ವಾಟ್ಸಾಪ್ ನ ಬಳಕೆದಾರರು ಕಡಿಮೆಯಾಗುತ್ತಲೇ ಹೋಗುತ್ತಿದ್ದಾರೆ. ಇದರಿಂದ ಇಂದು ಎಲ್ಲರ ಮೊಬೈಲ್ ಅಲ್ಲಿ ವಾಟ್ಸಪ್ ಸ್ಟೇಟಸ್ ನಲ್ಲಿ 4 ಇಮೇಜ್ ಗಳನ್ನು ಕಾಣಸಿಗುತ್ತದೆ.
ಅವುಗಳಲ್ಲಿ…
1) ವಾಟ್ಸಪ್ ನಾವು ನಿಮ್ಮ ಗೌಪ್ಯತೆಗೆ ಬದ್ಧರಾಗಿದ್ದೇವೆ.
2) ಗೌಪ್ಯತಾ ವಿಚಾರದಲ್ಲಿ ವಾಟ್ಸಪ್ ನಿಮ್ಮ ಕಾಂಟೆಕ್ಟ್ ಗಳನ್ನು ಫೇಸ್ಬುಕ್ಗೆ ಹಂಚಿಕೊಳ್ಳುವುದಿಲ್ಲ.
3)ವಾಟ್ಸಪ್ ನೀವು ಶೇರ್ ಮಾಡಿದಂತಹ ಲೋಕೇಶನ್ನು ಕೂಡ ನೋಡಲು ಸಾಧ್ಯವಾಗುವುದಿಲ್ಲ.
4)ವಾಟ್ಸಪ್ ನಲ್ಲಿ ಮಾಡಿದಂತಹ ನಿಮ್ಮ ನಡುವಿನ ಸಂಭಾಷಣೆಯ ಮತ್ತು ಎಲ್ಲಾ ವಿಚಾರಗಳು ಕೂಡ ಗೌಪ್ಯವಾಗಿರುತ್ತದೆ ಅದನ್ನು ನೋಡಲು ಸಾಧ್ಯವಿಲ್ಲ.
ಇಂತಹ ವಿಚಾರಗಳನ್ನು ವಾಟ್ಸಪ್ ತನ್ನ ಸ್ಟೇಟಸ್ ನಲ್ಲಿ ಹರಿಯಬಿಟ್ಟಿದ್ದು ಇದಕ್ಕೆ ಯಾರು ಕೂಡ ಹೆದರುವಂತಹ ಅವಶ್ಯಕತೆ ಇಲ್ಲ. ನೀವು ನಿಮ್ಮ ಮುಂದಿನ ರೀತಿಯಲ್ಲಿ ವಾಟ್ಸಪ್ ಅನ್ನು ಬಳಸಬಹುದು.
ಬರಹ : ಯಾಸೀನ್ ಬಂಗೇರಕಟ್ಟೆ ಪತ್ರಿಕೋದ್ಯಮ ವಿದ್ಯಾರ್ಥಿ, ಉಜಿರೆ
Note : ಸಂಶಯಗಳು ಇದ್ದರೆ ಕಮೆಂಟ್ ಬಾಕ್ಸಿನಲ್ಲಿ ಹಾಕಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.