ಜೆದ್ದಾ(www.vknews.in): ಸೌದಿ ಅರೇಬಿಯಾವು ಕಳೆದ ಒಂದು ವರ್ಷದಿಂದ ಕೊವಿಡ್ ಸಾಂಕ್ರಾಮಿಕ ಸಂದಿಗ್ಧತೆಯನ್ನು ಎದುರಿಸುತ್ತಿದ್ದು, ಇನ್ನು ಮುಂದೆ ಇಂತಹ ಪರಿಸ್ಥಿತಿಗೆ ನಾವು ಆಸ್ಪದ ಕೊಡಲಾರೆವು ಎಂದು ಸೌದಿ ಅರೇಬಿಯಾದ ಆರೋಗ್ಯ ಮಂತ್ರಿ ಡಾ. ತೌಫೀಕ್ ಅಲ್ ರಬೀಹ್ ಹೇಳಿದ್ದಾರೆ.
ಇತ್ತಿಚ್ಚೆಗೆ ಸೌದಿಯಲ್ಲಿ ದೈನಂದಿನ ಕೊವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿ ಆರೋಗ್ಯ ಮಂತ್ರಿ ಈ ಹೇಳಿಕೆಯನ್ನು ನೀಡಿದ್ದಾರೆ. ನೂರಕ್ಕಿಂತಲೂ ಕಡಿಮೆಯಾಗಿದ್ದ ದೈನಂದಿನ ಕೊವಿಡ್ ಪ್ರಕರಣಗಳು ಇದೀಗ ಮುನ್ನೂರರ ಅಂಚಿಗೆ ತಲುಪಿದ್ದು ಆರೋಗ್ಯ ಮಂತ್ರಾಲಯವನ್ನು ಚಿಂತೆಗೀಡು ಮಾಡಿದೆ.
ನಿನ್ನೆ ಸೌದಿಯಲ್ಲಿ 267 ಹೊಸ ಕೊವಿಡ್ ಪ್ರಕರಣಗಳು, 253 ರೋಗಮುಕ್ಕಿ ಹಾಗೂ 2 ಮರಣಗಳು ದಾಖಲಾಗುವುದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 367543, ಒಟ್ಟು ರೋಗಮುಕ್ತಿ ಸಂಖ್ಯೆ 359006 ಹಾಗೂ ಒಟ್ಟು ಮೃತರ ಸಂಖ್ಯೆ 6368 ಕ್ಕೆ ಏರಿಕೆಯಾಗಿದೆ. ಇದುವರೆಗೂ 2169 ರೋಗಿಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 355 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.