(www.vknews.com) : ಮುಡಿಪು ಸೆಂಟರ್ ಸುನ್ನಿ ಯುವಜನ ಸಂಘ ಇದರ ದಶಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ 21 ಜೋಡಿ ಸಾಮೂಹಿಕ ಮದುವೆ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲು ಇಂದು ಎಜ್ಯು ಪಾರ್ಕ್ ಮುಡಿಪುವಿನಲ್ಲಿ ನಡೆದ ಸಭೆಯಲ್ಲಿ ಸೇರಿದವರು ಒಕ್ಕೊರಲಿನಿಂದ ಅಭಿಪ್ರಾಯಪಟ್ಟರು.
ಸಭೆಯನ್ನು ಉದ್ದೇಶಿಸಿ ಈ ಮೊದಲು ಒಂಬತ್ತು ವರ್ಷಗಳಲ್ಲಿ 79 ಸಾಮೂಹಿಕ ವಿವಾಹ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಸಿದ್ದು ದಶ ವಾರ್ಷಿಕೋತ್ಸವದಲ್ಲಿ 21 ಜೋಡಿ ಸಾಮೂಹಿಕ ವಿವಾಹ ನಡೆಸುವಂತೆ ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ ಸಾರ್ವಜನಿಕರ ಸ್ವಾಂತಾನಕ್ಕಾಗಿ ಆಂಬುಲೆನ್ಸ್ ಒಂದನ್ನು ಖರೀದಿಸಿ ಜನರಿಗೆ ಉಪಯುಕ್ತವಾಗುವುದನ್ನು ಸಭೆಯಲ್ಲಿ ವಿವರಿಸಿ ಉದ್ಘಾಟಿಸಿ ರಾಜ್ಯ ಸಮಿತಿ ಸದಸ್ಯ ಕೆ ಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು ಮಾತನಾಡಿದರು.
ವೇದಿಕೆಯಲ್ಲಿ ಎಂ ಬಿ ಅಬೂಬಕ್ಕರ್ ಸಖಾಫಿ, ಶಾಲಿಮಾರ್ ಮುಹಮ್ಮದ್ ಹಾಜಿ, ಹಸನ್ ಹಾಜಿ ಸಾಂಬಾರತೋಟ, ಮುಹಮ್ಮದ್ ಅಲಿ ಮುಸ್ಲಿಯಾರ್ ಇರಾ, ಎಂಎಂಕೆ ಮುಹಮ್ಮದ್ ಮುಸ್ಲಿಯಾರ್ ಕಡ್ವಾಯಿ, ಮೋನಿಚ್ಚ ಎಚ್ ಕಲ್ಲು ಉಪಸ್ಥಿತರಿದ್ದರು ಸಮಾರಂಭ ಅಧ್ಯಕ್ಷತೆಯನ್ನು ಸೆಂಟರ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ವಹಿಸಿ ಪ್ರ,ಕಾರ್ಯದರ್ಶಿ ಬಶೀರ್ ಸಾಜಿಗಾರ್ ಸ್ವಾಗತಿಸಿ ಕಾರ್ಯದರ್ಶಿ ಆರ್ ಕೆ ಮದನಿ ಅಮ್ಮೆಂಬಳ ವಂದಿಸಿ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.