(www.vknews.com) : ಮಕ್ಕಳಲ್ಲಿ ಸ್ಮರಣ ಶಕ್ತಿ ಉತ್ತಮವಾಗಿರುತ್ತದೆ. ತಮ್ಮ ವಯಸ್ಸಿಗೆ ತಕ್ಕಂತೆ ಅಪಾರವಾದ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ನಿಸ್ಸೀಮರಾಗಿರುತ್ತಾರೆ. ಚುರುಕುತನವೂ ಸಹ ಕೆಲವು ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಇದರ ಸದುಪಯೋಗ ಪಡೆದುಕೊಂಡ ಕೆಲ ಪುಟಾಣಿಗಳು ತಮ್ಮ ಅದ್ಭುತ ಪ್ರತಿಭೆಗಳಿಂದ ಜನರ ಮನಸ್ಸು ಗೆಲ್ಲುತ್ತಾರೆ. ಅಲ್ಲದೇ ಅತೀ ಕಿರಿಯ ವಯಸ್ಸಿನಲ್ಲಿಯೇ ಉನ್ನತ ಸಾಧನೆಯ ಮೆಟ್ಟಿಲೇರುತ್ತಾರೆ. ಅದೇ ಸಾಲಿಗೆ ಸದ್ಯ ಗುರುಮಠಕಲ್ ನ ಲಕ್ಷ್ಮೀ ತಿಮ್ಮಪ್ಪ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟ್ಟ ಬಾಲಕ ಅಸಾಧಾರಣ ನೆನಪಿನ ಶಕ್ತಿಯಿಂದ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾನೆ. ಪಟ್ಟಣದ ಎಸ್ ಎಲ್ ಟಿ ಶಿಕ್ಷಣ ಸಂಸ್ಥೆಯಲ್ಲಿ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ 6 ವರ್ಷದ ಲಕ್ಷ್ಮೀ ತಿಮ್ಮಪ್ಪ ರಾಠೋಡ ಎಂಬ ಪುಟ್ಟ ಬಾಲಕ 197 ರಾಷ್ಟ್ರಗಳ ಧ್ವಜಗಳನ್ನು ಗುರುತ್ತಿಸಿ ಕೇವಲ 2 ನಿಮಿಷ 4 ಸೆಕೆಂಡ್ ಗಳಲ್ಲಿ ರಾಷ್ಟ್ರಗಳ ಹೆಸರುಗಳನ್ನು ಹೇಳುವ ಮೂಲಕ ದಾಖಲೆ ಬರೆದಿದ್ದಾನೆ. ಮೂಲತ ಗುರುಮಠಕಲ್ ನಿವಾಸಿಗಳಾದ ಭಾರತಿ ರಾಠೋಡ ಮಣಿಕಂಠ ರಾಠೋಡ ಎಂಬುವವರ ಮಗ.
ಲಾಕ್ ಡೌನ್ ಸಮಯದಲ್ಲಿ ಈ ಬಾಲಕನ ನೆನಪಿನ ಶಕ್ತಿ ಯನ್ನು ಅರಿತ ಶಿಕ್ಷಕಿ ವಿಜಯಲಕ್ಷ್ಮೀ ಆತನ ಪ್ರತಿಭೆಗೆ ಮತ್ತಷ್ಟು ಸಾಮರ್ಥ್ಯ ತುಂಬುವ ಕಾರ್ಯ ಮಾಡಿ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವಂತೆ ಮಾಡಿ ಈ ಭಾಗದ ಕೀರ್ತಿಯನ್ನು ಹೆಚ್ಚಿಸಿದರು . ಇನ್ನು ಬಾಲಕನ ವಿಶೇಷ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.
ಲಕ್ಷ್ಮೀ ತಿಮ್ಮಪ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ರಾಠೋಡ , ಅಪರಾಧ ವಿಭಾಗದ ಪಿ ಎಸ್ ಐ ಗಂಗಮ್ಮ , ಶಾಲೆಯ ಆಡಳಿತ ಮಂಡಳಿ , ಶಿಕ್ಷಕಿಯರು ಹಾಗೂ ಬಾಲಕನಿಗೆ ತರಬೇತಿ ನೀಡಿದ ಶಿಕ್ಷಕಿ ವಿಜಯಲಕ್ಷ್ಮಿ ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.