ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಮತ್ತೆ ರೂಪಾಂತರಿತ ಕೊವಿಡ್ ಭೀತಿ ಎದುರಾಗಿದ್ದು, ಮುಂಜಾಗೃತಾ ಕ್ರಮವಾಗಿ ಫೆಬ್ರವರಿ 3 ರಿಂದ ಯುಎಇ, ಭಾರತ ಸೇರಿದಂತೆ 20 ರಾಷ್ಟ್ರಗಳಿಂದ ಸೌದಿ ಅರೇಬಿಯಾಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಸೌದಿ ಅರೇಬಿಯಾ ಪ್ರವೇಶ ನಿಷೇಧಿಸಿರುವ ರಾಷ್ಟ್ರಗಳಲ್ಸಿ ಅರ್ಜೆಂಟೀನಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುನೈಟೆಡ್ ಸ್ಟೇಟ್ಸ್, ಇಂಡೋನೇಷ್ಯಾ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಬ್ರೆಜಿಲ್, ಪೋರ್ಚುಗಲ್, ಯುನೈಟೆಡ್ ಕಿಂಗ್ಡಮ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಲೆಬನಾನ್, ಈಜಿಪ್ಟ್, ಭಾರತ ಮತ್ತು ಜಪಾನ್ ಸೇರಿದೆ. ಯುಎಇಯಿಂದ ಸೌದಿಗೆ ಪ್ರವೇಶ ನಿಷೇಧದಿಂದಾಗಿ ಭಾರತದಿಂದ ದುಬೈ ಮುಖಾಂತರ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವವರಿಗೆ ತೊಡಕುಂಟಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.