ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಬೇನಾಮಿ ಬ್ಯಾಂಕ್ ಅಕೌಂಟ್ ಮೂಲಕ 60 ಕೋಟಿ ರಿಯಾಲ್ ಹವಾಲಾ ಹಣವನ್ನು ವಿದೇಶಗಳಿಗೆ ವರ್ಗಾಯಿಸಿ ಸ ಬಂಧಿತರಾಗಿದ್ದ 8 ವಿದೇಶಿಗಳೂ ಸೇರಿದಂತೆ 12 ಮಂದಿಗೆ ಸೌದಿ ನ್ಯಾಯಾಲಯವು 60 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆ ಪೂರ್ತಿಯಾದ ಬಳಿಕ ವಿದೇಶಗಳಿಗೆ ವರ್ಗಾಯಿಸಿದ 60 ಕೋಟಿ ರಿಯಾಲನ್ನು 80 ಲಕ್ಷ ರಿಯಾಲ್ ದಂಡದೊಂದಿಗೆ ವಸೂಲಿ ಮಾಡಿ ಸೌದಿಯಿಂದ ಗಡಿಪಾರು ಮಾಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.
ಸೌದಿಯಲ್ಲಿ ಹೊಸ ಹಣಕಾಸು ನೀತಿಯಡಿಯಲ್ಲಿ ವಿದೇಶಿಗಳ ಬ್ಯಾಂಕ್ ಅಕೌಂಟ್ ಗಳನ್ನು ಪರಿಶೀಲಿಸಲಾಗುತ್ತಿದ್ದು, ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣವನ್ನು ವರ್ಗಾಯಿಸುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಬಂಧಿತರಲ್ಲಿ ಹಣ ವರ್ಗಾವಣೆಗೆ ಸಹಕರಿಸಿದ ಆರೋಪದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸೌದಿ ಪ್ರಜೆಗಳು ಒಳಗೊಂಡಿದ್ದು, ಬಂದಿತ ವಿದೇಶಿಗಳಲ್ಲಿ ಭಾರತೀಯರೂ ಸೇರಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.