ಕೋಲಾರ( ವಿಶ್ವಕನ್ನಡಿಗ ನ್ಯೂಸ್ ): ತಾಲೂಕಿನ ಮಲ್ಲಸಂದ್ರ ಗ್ರಾಮ , ಹೊಸಹಳ್ಳಿ ಬೈರನಹಳ್ಳಿಯ ಮಾರ್ಗದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ೪ ಕೋಟಿ ರೂ.ವೆಚ್ಚದಲ್ಲಿ ೭೫ ಕಿ.ಮೀ ರಸ್ತೆ ಕಾಂಗಾರಿಗೆ ಶಾಸಕ ಕೆ.ಶ್ರೀನಿವಾಸಗೌಡ , ಎಂಎಲ್ಸಿ ಇಂಚರ ಗೋವಿಂದರಾಜು ಅವರು ಗುದ್ದಲಿ ಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ , ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದರೆ ಇಡೀ ದೇಶ ಅಭಿವೃದ್ದಿಯಾಗುತ್ತದೆ. ಗ್ರಾಮಗಳ ನಡುವೆ ಇರುವ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದು , ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆಗಳನ್ನ ಅಭಿವೃದ್ಧಿ ಮಾಡುವುದಾಗಿ ಹೇಳಿದರು.
ಈ ಹಿಂದೆ ಸಿ.ಬೈರೇಗೌಡರು ಸಹ ಇಡೀ ವೇಮಗಲ್ ಕ್ಷೇತ್ರದ ವ್ಯಾಪ್ತಿಗೆ ಬರುವ ಸಂಪರ್ಕ ರಸ್ತೆಗಳಿಗೆ ಒತ್ತು ಕೊಟ್ಟಿದ್ದರು. ಅಲ್ಲದೆ ಯಾವುದೇ ಗ್ರಾಮಕ್ಕೂ ಹೋದರು ಕೂಡ ಗುಣಮಟ್ಟದ ರಸ್ತೆಗಳನ್ನ ಕಾಣುತ್ತಿದ್ದವು. ಅದೇ ಮಾದರಿಯಲ್ಲಿ ನನ್ನ ಅವಧಿಯಲ್ಲಿಯೂ ಸಂಪರ್ಕಗಳ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.
ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ , ಗ್ರಾಮಗಳಲ್ಲಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಗುಣಮಟ್ಟವನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಸಹ ಮಾಡುವ ಕೆಲಸದಲ್ಲಿ ಪ್ರಮಾಣಿಕತೆ ತೋರಿಸಿದರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಲಾರ ನಗರದ ಅಭಿವೃದ್ಧಿಗಳಿಗೆ ಸುಮಾರು ೩೦ ಕೋಟಿ ರೂಪಾಯಿ ಗಳನ್ನ ಬಿಡುಗಡೆ ಮಾಡಿದ್ದರು. ನಗರದಲ್ಲಿ ನಡೆಯುತ್ತಿರುವ ಜೋಡಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿದೆ ಎಂದು ಹೇಳಿದರು. ಇಷ್ಟೆ ಅಲ್ಲದೆ ಕೋಲಾರಮ್ಮ ಕೆರೆ ಅಭಿವೃದ್ದಿಯು ಸುಮಾರು ೮ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಕುಮಾರಸ್ವಾಮಿ ಅವರು ನೀಡಿರುವ ಅನುದಾನ ಆದರೆ ಕೆಲವರು ನಮ್ಮ ಸರ್ಕಾರವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಕೋಲಾರ ನಗರದ ಎಸ್ಎನ್ಆರ್ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಸುಮಾರು ೬೦ ಲಕ್ಷ ರೂ . ವೆಚ್ಚದಲ್ಲಿ ವಿಶೇಷ ಕೊಠಡಿಗಳ ಕಾಂಗಾರಿ , ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವ ಹಣೆಗೆ ೨ ಕೋಟಿ ಮೀಸಲು , ಕೋಲಾರ ನಗರದ ಇಟಿಸಿಎಂ ಆಸ್ಪತ್ರೆಯ ಪಕ್ಕದಲ್ಲಿ ೭೨ ಲಕ್ಷ ರೂಪಾಯಿ ವೆಚ್ಚದಲ್ಲಿ ಮಾದರಿ ದ್ವಿಪದ ರಸ್ತೆ ನಿರ್ಮಾಣ ಹೀಗೆ ಅಭಿವೃದ್ಧಿ ಕೆಲಸಗಳನ್ನು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗನಾಳ ಸೋಮಣ್ಣ , ಸಿಎಂಆರ್.ಶ್ರೀನಾಥ್ , ಮಲ್ಲಸಂದ್ರ ಎನ್ . ಬಚ್ಚಣ್ಣ , ಮಲ್ಲಸಂದ ಜಗಧೀಶ್ , ಕುರ್ಕಿರಾಜೇಶ್ವರಿ , ಎಂಡಿ.ದೇವರಾಜ್ , ತಿರುಮಲೇಶ್ , ಆನಂದ್ , ಖಾಜಿಕಲ್ಲಹಳ್ಳಿ ಹರೀಶ್ಗೌಡ , ಚಿಕ್ಕವೀರಪ್ಪ ಗುತ್ತಿಗೆದಾರ ವೆಂಕಟರಾಮರೆಡ್ಡಿ ಮತ್ತಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.