ಹಾವೇರಿ (ವಿಶ್ವ ಕನ್ನಡಿಗ ನ್ಯೂಸ್) : ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಜಿ ಸೈನಿಕರಾದ ಶ್ರೀ ಹೊನ್ನಪ್ಪ ಕಟಪ್ಪನವರ.. ಗಂಗಾಧರ ಹಿರೇಮಠ ಎಂಬುವರು ಸುಮಾರು 22 ವರ್ಷ ದಿಂದ ಅಲೆದಾಡಿದರು ಆಸ್ತಿ ಹಾಗೂ ಇತರೇ ಸೌಲಭ್ಯಗಳು ಸಿಗದೇ ಇದ್ದರಿಂದ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾವೇರಿ ಜಿಲಿಲಾ ಘಟಕವು ಮಾಜಿ ಸೈನಿಕ ರೊಂದಿಗೆ ಸೇರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು .
ನಂತರ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾವೇರಿ ಜಿಲ್ಲಾ ತಹಸೀಲ್ದಾರ ಗಿರೀಶ್ ಸ್ವಾದಿ ಅವರು ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ತಮಗೆ ನ್ಯಾಯ ಕೊಡಿಸುವುದಾಗಿ ಮನವಿ ಮಾಡಿ ಮಾಜಿಸೈನಿಕರಿಗೆ ನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ತೆರೆ ಎಳೆದರು ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಹಾವೇರಿ ಜಿಲ್ಲಾದ್ಯಕ್ಷರಾದ ಡಿ ಬಿ ಸೋಮಶೇಖರಗೌಡ ಮುಂದಿನ 15 ದಿನದ ಒಳಗಾಗಿ ಈ ಮಾಜಿ ಸೈನಿಕರಿಗೆ ಸೌಲಭ್ಯ ಕೊಡಿಸಲು ವಿಫಲವಾದಲ್ಲಿ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಆಮರಣಾಂತರ ಉಪವಾಸ ಸತ್ಯಾಗ್ರಹಃ ಮಾಡಲಾಗುವುದೆಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.