ಶಿವಮೊಗ್ಗ (www.vknews.com) : ಬ್ರಿಟೀಷರನ್ನು ಓಡಿಸಿ ಸ್ವಾತಂತ್ರ್ಯ ಪಡೆಯುವುದೊಂದೇ ಗಾಂಧಿಯವರ ಹೋರಾಟದ ಉದ್ದೇಶವಾಗಿರಲಿಲ್ಲ. ದೇಶದ ಪ್ರಗತಿಗೆ ಅಡ್ಡಿಯಾಗಿರುವ ಕೋಮುಸಂಘರ್ಷ, ಅಸ್ಪøಶ್ಯತೆಯ ಆಚರಣೆ, ಲಿಂಗತಾರತಮ್ಯಗಳನ್ನು ದೇಶದ ಜನರ ಮನಸ್ಸಿನಿಂದ ಕಿತ್ತೊಗೆಯುವುದು ಅವರ ಹೋರಾಟದ ಪ್ರಮುಖ ಆದ್ಯತೆಯಾಗಿತ್ತು. ಪ್ರಸ್ತುತ ದಿನದಿನಕ್ಕೂ ಭೀಕರ ರೋಗದಂತೆ ದೇಶಾದ್ಯಂತ ವ್ಯಾಪಿಸುತ್ತಿರುವ ಮತಾಂಧತೆ, ದಲಿತರ ಮೇಲಿನ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಘಟನೆಗಳಿಂದ ಇದೆಲ್ಲದರ ವಿರುದ್ಧ ಜೀವನಪರ್ಯಂತ ಹೋರಾಡಿದ ಗಾಂಧಿಯ ಆತ್ಮ ವಿಲವಿಲನೆ ಒದ್ದಾಡುತ್ತಿರಬಹುದು ಎಂದು ಹಿರಿಯ ಸಾಹಿತಿ ಕೆ.ಆರ್.ಉಮಾದೇವಿ ಉರಾಳ ಅವರು ವಿಷಾದಿಸಿದರು.
ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.
ದಿನನಿತ್ಯ ಗಾಂಧಿಯ ಭಜನೆ ಮಾಡುವ ಈ ದೇಶದ ಪ್ರಜೆಗಳಾದ ನಾವು ತೋರುಗಾಣಿಕೆಗೆ ಮಾತ್ರ ನಾಗರಿಕರು. ಗಾಂಧಿಯ ತತ್ವಗಳನ್ನು ಭಾಷಣಕ್ಕಷ್ಟೇ ಸೀಮಿತಗೊಳಿಸಿರುವ ನಾವು ಅಂತರಂಗದಲ್ಲಿ ಅನಾಗರೀಕರಾಗಿದ್ದೇವೆ. ಏಕೆಂದರೆ ಈ ನಾಡಿನಲ್ಲಿ ನಮ್ಮ ಕಣ್ಮುಂದೆಯೇ ಮತಾಂಧತೆ, ಅಸ್ಪøಶ್ಯತೆಯ ಆಚರಣೆ, ಮಹಿಳೆಯರ ಮೇಲೆ, ಪುಟ್ಟ ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದ್ದರೂ ನಾವು ಅದನ್ನು ಪ್ರತಿಭಟಿಸದೆ ಮೌನವಾಗಿದ್ದೇವೆ ಎಂದು ಕೆ.ಆರ್ ಉಮಾದೇವಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಾರೋಗೊಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ್ ಅವರು ಗಾಂಧಿಯವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ವಿವರಿಸಿ ಹರಳಿಮಠ ಶಾಲೆಯ ಅಭಿವೃದ್ಧಿಗೆ ಪಂಚಾಯತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ತಕ್ಷಣವೇ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ಪ್ರಸನ್ನ, ಸದಸ್ಯರಾದ ಇಂದಿರಮ್ಮ, ದಲಿತ ಸಂಘರ್ಷ ಸಮಿತಿಯ ಮುಖಂಡ ವಿಶ್ವನಾಥ್, ಸಹಕಾರಿ ಧುರೀಣ ರತ್ನಾಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪ್ರಕಾಶ್, ನಾಗಲಕ್ಷ್ಮಿ, ಪ್ರತಿಮಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯರಾದ ರಮೇಶ್ ಸ್ವಾಗತಿಸಿದರು. ಶಿಕ್ಷಕರಾದ ಉಷಾಕುಮಾರಿ ಅತಿಥಿಗಳ ಪರಿಚಯ ಮಾಡಿಕೊಟ್ಟರು, ಶಿಕ್ಷÀಕ ಜಯಪ್ಪ ನಿರೂಪಿಸಿ, ವಂದಿಸಿದರು.
5ನೇ ತರಗತಿಯಲ್ಲಿ ಅಶ್ವಿತ್ ಕೆ.ವಿ, ನಯಾಜ್ ಕೆ.ಎ, ಧೃತಿ ಎನ್,ವೈ, ಮಿಥುನ್ ಎಚ್.ಡಿ, 10ನೇ ತರಗತಿಯಲ್ಲಿ ಶ್ರಾವ್ಯ ಎಚ್.ಎಸ್, ಪ್ರಜ್ಞಾ ಕೆ.ಟಿ, ಮತ್ತು ನವೀನ ಎಚ್.ಆರ್ 28ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.