ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಪತ್ರಕರ್ತರು ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಬಾರದು , ಅವರು ನಿಮ್ಮ ಸಂಘ ಬರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿ ತಮ್ಮ ವೃತ್ತಿಯ ಗೌರವ ಘನತೆಯನ್ನು ಕಾಪಾಡಿ ಕೊಳ್ಳುವಂತಾಗ ಬೇಕೆಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.
ಮಾಲೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ೨ ನೇ ಕೋಲಾರ ಜಿಲ್ಲಾ ಪತ್ರಕರ್ತರ ಸಮ್ಮೇಳನ ಹಾಗೂ ಸರ್ವ ಸದಸ್ಯರ ಸಭೆ ಮತ್ತು ಮಾಲೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಭವನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು . ಪತ್ರಕರ್ತರು ಸಮಾಜದಲ್ಲಿನ ಲೋಪದೋಷಗಳ ಜೊತೆಗೆ ಒಳ್ಳೆಯ ಕೆಲಸಗಳನ್ನು ಗುರುತಿಸುವಂತಾಗ ಬೇಕು .
ಕೋವಿಡ್ ಸಂದರ್ಭದಲ್ಲಿನ ಪ್ರಕರಣಗಳನ್ನು ಉದಾಹರಿಸಿದ ಅವರು ಯಾವುದೇ ರಾಜಕಾರಣಿ ಅಥವಾ ಅಧಿಕಾರಿಯ ಪರವಾಗಿ ವಿರುದ್ಧವಾಗಿ ಪತ್ರಕರ್ತರು ಇರದೆ ತಮ್ಮ ಪ್ರಾಮಾಣಿಕತೆಯನ್ನು ಉಳಿಸಿ ಕೊಂಡು ಪತ್ರಿಕಾ ರಂಗದ ಮೌಲ್ಯಗಳನ್ನು ಉಳಿಸಿ ಕೊಳ್ಳಬೇಕೆಂದರು . ಪತ್ರಕರ್ತರ ಸಂಖ್ಯೆ ಹೆಚ್ಚಾದಷ್ಟು ಪತ್ರಿಕಾ ಮೌಲ್ಯಗಳು ಕುಸಿಯುತ್ತಿರುವುದು ಕಳವಳಕಾರಿಯಾಗಿದೆ . ಪತ್ರಿಕಾ ವೃತ್ತಿಯು ಯಾವುದೇ ರೀತಿ ಭ್ರಷ್ಟಚಾರ ಇಲ್ಲದ ಪವಿತ್ರವಾದ ವೃತ್ತಿ ಎಂಬ ಗೌರವನ್ನು ಉಳಿಸಿ ಕೊಂಡು ಸಮಾಜಕ್ಕೆ ಮಾದರಿಯಾಗಬೇಕು .
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು . ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಎಲ್ಲರೂ ಶಿಕ್ಷಣಸ್ಥರಾಗಿದ್ದಾರೆ ಮಾತ್ರ ತಿಳುವಳಿಕೆ ಇರಲು ಸಾಧ್ಯ . ಮಾತಿಗಿಂತ ಅನುಭವ ಮತ್ತು ನೋಡಿ , ಕೇಳುವುದರಿಂದಲೂ ಸುಲಭವಾಗಿ ತಿಳುವಳಿಕೆ ಪಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದರು . ರಾಜಕಾರಣಿಗಳ ಮನೆ ಬಾಗಿಲಿಗೆ ಪತ್ರಕರ್ತರು ಹೋದ ಮಾತ್ರಕ್ಕೆ ಭ್ರಷ್ಟರಾಗಲು ಸಾಧ್ಯವಿಲ್ಲ . ಪತ್ರಕರ್ತರು ತಮ್ಮ ಸ್ವಾರ್ಥಕ್ಕಾಗಿ ಹೋಗದೆ , ಜನಪರ ಕಾರ್ಯಗಳಿಗೂ ಹೋಗಬೇಕಾಗುತ್ತದೆ . ಎಲ್ಲಾ ರಾಜಕಾರಣಿಗಳು , ಪತ್ರಕರ್ತರು ಭಷ್ಟರಲ್ಲ . ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪತ್ರಕರ್ತರ ಸಲಹೆಗಳು – ಸಹಕಾರ ರಾಜಕಾರಣಿಗಳಿಗೆ ಅಗತ್ಯವಾಗಿ ಬೇಕಾಗುತ್ತದೆ ಎಂದರು .
ಅನುಭವ ಮತ್ತು ನಂಬಿಕೆಯಿಂದ ಯಾವುದೇ ಸಾಧನೆ ಸಾಧ್ಯ ಎಂಬುವುದನ್ನು ಅನೇಕ ಹಿರಿಯ ಪತ್ರಕರ್ತರು ಮಾರ್ಗದರ್ಶನ ನೀಡಿರುವುದನ್ನು ನೆನಪಿಸಿ ಕೊಳ್ಳಬಹುದಾಗಿದೆ . ಪತ್ರಿಕೋದ್ಯಮದಲ್ಲಿ ಉತ್ತಮ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮತ್ತೊಬ್ಬರಿಗೆ ಪ್ರೇರಣೆಯಾಗಲು ಸಾಧ್ಯ . ಜನಪ್ರತಿನಿಧಿಗಳು ಮತ್ತು ಪತ್ರಕರ್ತರು ಜೊತೆಯಾದಾಗ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು .
ಕೋವಿಡ್ ೧ ಮತ್ತು ೨ಅನೇ ಅಲೆಯಲ್ಲಿ ಪತ್ರಕರ್ತರು ವಾರಿಯರ್ಸ್ಗಳಾಗಿ ಕೆಲಸ ಮಾಡಿದ್ದಾರೆ . ಅಲ್ಲದೆ ನಾನು ಕೂಡ ಪ್ರತಿದಿನಾ ಅಧಿಕಾರಿಗಳು , ಸಂಘ – ಸಂಸ್ಥೆಗಳ ಸಮ್ಮುಖದಲ್ಲಿ ಸಭೆಗಳನ್ನ ಮಾಡುವ ಮೂಲಕ ಕೊರೋನಾ ನಿಯಂತ್ರಿಸುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ . ಇದಕ್ಕೆ ಪತ್ರಕರ್ತರು ಉತ್ತಮ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು .
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ಪತ್ರಕರ್ತರು ತಮ್ಮ ವೃತ್ತಿಯ ಸ್ವಾಭಿಮಾನಿಗಳಾಗಿ ಮೆರೆಯುವಂತಾಗ ಬೇಕು . ಹೊಗಳಿಕೆ ಮತ್ತು ತೆಗಳಿಕೆಯಲ್ಲಿ ಯಾವುದೇ ರಾಜಿ ಇಲ್ಲದೆ , ಪಾರದರ್ಶಕತೆ ಮತ್ತು ನಿಷ್ಪರತೆಯಿಂದ ತಮ್ಮ ವರದಿಗಳನ್ನು ಪ್ರಕಟಿಸುವಂತಾಗಬೇಕು . ಆಗ ರಾಜಕಾರಣಿಗಳೇ ಪತ್ರಕರ್ತರ ಬಳಿಗೆ ಬರುವಂತಾಗುತ್ತದೆ ಎಂದ ಅವರು ಪತ್ರಕರ್ತರು ನಿಷ್ಕ್ರಿಯೆಗೊಂಡಾಗ ಸಮಾಜದಲ್ಲಿ ಗೌರವ , ಮಾರ್ಯಾದೆಗಳು ಸಿಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು ಕೋಲಾರ ಜಿಲ್ಲೆಯ ಪತ್ರಕರ್ತರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಹೇಳಿದರು .
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪತ್ರಿಕಾ ವೃತ್ತಿಯ ಬಗ್ಗೆ ಜನಪ್ರತಿನಿಧಿಗಳ ನೇರ ನುಡಿಗಳಿಂದ ಪ್ರತಿಯೊಬ್ಬ ಪತ್ರಕರ್ತರು ತಮ್ಮ ನಡುವಳಿಕೆಗಳ ಬಗ್ಗೆ ಆತ್ಮವಲೋಕನ ಮಾಡಿ ಕೊಳ್ಳುವಂತಾಗ ಬೇಕೆಂದರು .ಪತ್ರಕರ್ತರು ತಮ್ಮ ವರದಿಗಳಿಂದ ಗೌರವ ಘನತೆಯನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ . ನಾವು ಪ್ರಕಟಿಸುವ ವರದಿಗಳು ಜನರ ಮನದಲ್ಲಿ ಹೆಚ್ಚಿನ ಪರಿಣಾಮ ಬೀರಿ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆಯಾಗಲಿದೆ. ಅದೇ ರೀತಿ ಲೋಪ ದೋಷಗಳನ್ನು ಗುರುತಿಸಿ ಸಮಾಜವನ್ನು ಗುರುತಿಸಿ ತಿದ್ದುವಂತ ಮಾರ್ಗದರ್ಶನ ನೀಡಲು ಸಾಧ್ಯವಾಗಲಿದೆ ಎಂದರು .
ಸ್ವಾತಂತ್ರ್ಯದ ಮಾದರಿಯ ಹೆಜ್ಜೆಯ ಗುರುತಿನಲ್ಲಿ ಪತ್ರಿಕೋದ್ಯಮದ ಇತಿಹಾಸ ಸಾಗಿ ಬಂದಿದೆ . ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್ . ಅಂಬೇಡ್ಕರ್ ಇಬ್ಬರು ಭಾರತದ ಕಣ್ಣುಗಳು ಇದ್ದಂತೆ ಇವರಿಬ್ಬರು ಮೂಲತಹಃ ಪತ್ರಕರ್ತರಾಗಿದ್ದರು ಎಂಬುವುದು ಹೆಮ್ಮೆಯ ಸಂಗತಿಯಾಗಿದೆ . ಅವರ ಮಾರ್ಗದರ್ಶನದಲ್ಲಿ ಪತ್ರಕರ್ತರು ಸಾಗಬೇಕೆಂದು ಕರೆ ನೀಡಿದರು .
ಸಮಾಜವು ಪತ್ರಕರ್ತರ ನಡುವಳಿಕೆ ಬಗ್ಗೆ ಗಮನ ಹರಿಸುತ್ತಿರುತ್ತದೆ ಎಂಬ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇದ್ದು ತಮ್ಮ ವೃತ್ತಿಯನ್ನು ಜವಾಬ್ದಾರಯಿಂದ ನಿರ್ವಹಿಸ ಬೇಕು . ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಮನೆಯಲ್ಲಿಯೇ ಕುಳಿತು ಎಲ್ಲವನ್ನು ಕಾರ್ಯನಿರ್ವಹಿಸ ಬಹುದಾಗಿದೆ . ವೃತ್ತಿಗೆ ಬದ್ಧರಾಗಿ , ಪತ್ರಿಕಾ ರಂಗದ ನೈಜಕತೆಯನ್ನು ಕಳೆಯದಂತೆ ತಮ್ಮ ಮತ್ತು ವೃತ್ತಿಯ ಗೌರವವನ್ನು ಕಾಪಾಡಿ ಕೊಂಡು ಮುಂದುವರೆಯ ಬೇಕು ಎಂದರು .
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣವು ನವಿಕರಣದಿಂದ ರಾಜ್ಯಕ್ಕೆ ಮಾದರಿಯಾಗಿದೆ . ಸಂಘವು ಕ್ರಿಯಶೀಲತೆಯಿಂದ ಕಾರ್ಯನಿರ್ವಹಿಸುತ್ತಿದೆ . ಜಿಲ್ಲಾ ಸಂಘದ ನಿರ್ಮಾಣಕ್ಕೆ ಹಲವು ಹಿರಿಯ ಪತ್ರಕರ್ತರ ಶ್ರಮ ಮತ್ತು ರಾಜಕಾರಣಿಗಳ ದೇಣಿಗೆ ಮತ್ತು ಸರ್ಕಾರಿ ಅಧಿಕಾರಿಗಳ ಸಹಕಾರ ಕ ಇದೆ . ಇದೇ ರೀತಿ ಮಾಲೂರಿನಲ್ಲಿ ಹೊಸದಾಗಿ ಪತ್ರಕರ್ತರ ಸಂಘದ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು .
ಕೋವಿಡ್ ಸಂದರ್ಭದಲ್ಲಿ ಸರ್ಕಾರದಿಂದ ನೆರವು ಘೋಷಣೆಯಾಗುವಂತೆ ಮಾಡಲು ರಾಜ್ಯ ಸಂಘದ ಪದಾಧಿಕಾರಿಗಳ ಶ್ರಮವನ್ನು ವಿವರಿಸಿದ ಅವರು ಕೋವಿಡ್ಗೆ ಬಲಿಯಾದ ಪತ್ರಕರ್ತರನ್ನು ನೆನಪಿಸಿದರು .ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ , ತಮ್ಮ ಅಧ್ಯಕ್ಷ ಸ್ಥಾನದ ಅವಧಿಯ ಕಾರ್ಯ ಸಾಧನೆಯನ್ನು ಸುಧೀರ್ಘವಾಗಿ ವಿವರಿಸಿದರು . ಅಲ್ಲದೆ ಕೋಲಾರ ಜಿಲ್ಲೆಯ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿದ್ದರೆ . ಎಷ್ಟೋ ಮಂದಿ ಪತ್ರಕರ್ತರು ಇವತ್ತು ರಾಜ್ಯದಲ್ಲಿ ಒಳ್ಳೆಯ ಹೆಸರನ್ನ ಗಳಿಸಿದ್ದಾರೆ ಎಂದ ಅವರು , ಪತ್ರಕರ್ತ ಸದಸ್ಯರಿಗೆ ವಿಮಾ ಯೋಜನೆ , ಪತ್ರಕರ್ತರಿಗೆ ಆರೋಗ್ಯ ವೆಚ್ಚ ನೀಡುವುದರ ಜೊತೆಗೆ ಪತ್ರಕರ್ತರ ಭವನದ ನವೀಕರಣ ಸೇರಿದಂತೆ ಸಂಘದ ಅಭಿವೃದ್ಧಿಗೆ ಸಹಕರಿಸಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವುದಾಗಿ ತಿಳಿಸಿದರು .
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘವು ಸಮರ್ಥವಾಗಿದ್ದು , ಮಾಲೂರು ಸಂಘವು ಅದೇ ಹಾದಿಯಲ್ಲಿ ಕ್ರಿಯಾಶೀಲತೆಯಿಂದ ಸಾಗುತ್ತಿರುವುದು ಶ್ಲಾಘನೀಯ ಎಂದರು . ಜಿಲ್ಲಾ ಸಂಘದ ಕ್ರಿಯಶೀಲತೆಯ ಕಾರ್ಯಕ್ರಮಗಳಿಂದ ಪತ್ರಕರ್ತರಲ್ಲಿ ಆತ್ಮಸ್ಥೆರ್ಯ ಮೋಡಿಸುತ್ತಿದೆ . ಪತ್ರಕರ್ತರು ರಾಜಕಾರಣಿಗಳ ಹೊಗಳಿಕೆ , ತೆಗಳಿಕೆಗೆ ಬಲಿಯಾಗದೆ ನಿಫ್ಟಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ವೃತ್ತಿಗೌರವನ್ನು ಕಾಪಾಡಿ ಕೊಳ್ಳುವಂತಾಗ ಬೇಕೆಂದ ಅವರು ರಾಜಕಾರಣಿಗಳು ಸಿದ್ಧಾಂತಗಳು ಮರೆಯಾಗಿ ಅಭಿವೃದ್ಧಿಯು ಮರೀಚಿಕೆಯಾಗಿದೆ .
ರಾಜಕಾರಣಿಗಳು ಅಧಿಕಾರಿಗಳ ಮುಂದೆ ತಮ್ಮ ಸಣ್ಣತನ ಪ್ರದರ್ಶನವನ್ನು ಬಿಡುವಂತಾಗಬೇಕು ಎಂದು ಹೇಳಿದರು . ರಾಜಕಾರಣವು ಚುನಾವಣೆಗೆ ಮೀಸಲಿಟ್ಟು ಅಭಿವೃದ್ಧಿಯ ಕಡೆ ನಿಮ್ಮ ಕಾಳಜಿ ಇರಲಿ , ಪತ್ರಕರ್ತರು ರಾಜಕರಣಿಗಳ ಮನಬಾಗಿಲಿಗೆ ಬರುವಂತ ಸನ್ನಿವೇಶಗಳನ್ನು ಹುಟ್ಟುಹಾಕದ ಸಾರ್ವಜನಿಕರಿಗೆ ಸಮರ್ಪಕವಾದ ಸೌಲಭ್ಯಗಳನ್ನು ಕಲ್ಪಿಸುವಂತಾಗ ಬೇಕೆಂದ ಅವರು ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಗಟ್ಟಿತನವನ್ನು ಉಳಿಸಿ ಕೊಳ್ಳುವಂತಾಗ ಬೇಕು ತಮ್ಮ ಕರ್ತವ್ಯದ ಬಗ್ಗೆ ಆತ್ಮವಿಮರ್ಷ ಮಾಡಿಕೊಳ್ಳ ಬೇಕೆಂದರು .
ಮರಸಭೆ ಅಧ್ಯಕ್ಷ ಎನ್.ಪಿ.ಮುರಳೀಧರ್ ಮಾತನಾಡಿ ಪತ್ರಕರ್ತರು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಬೇಕು , ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಬದ್ಧತೆಗಳು ಮಾನವೀಯತೆಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು .
R ರಾಮೇಗೌಡ ಟ್ರಸ್ಟ್ನ ಲಕ್ಷ್ಮೀ ರಾಮೇಗೌಡ ಮಾತನಾಡಿ ರಾಜ್ಯಾಂಗ , ಕಾರ್ಯಾಂಗ , ನ್ಯಾಯಾಂಗದ ಮಾದರಿಯಲ್ಲಿ ಪತ್ರಿಕಾರಂಗವು ಭಾರತದ ನಾಲ್ಕನೇ ಅಂಗವೆಂದು ಗುರುತಿಸಿ ಸಮಾಜದಲ್ಲಿ ಮಹತ್ವವಾದ ಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಆದರೆ ಮಾದ್ಯಮಗಳು ಇತ್ತೀಚೆಗೆ ತಮ್ಮ ಹಾದಿ ತಪ್ಪುತ್ತಿದೆ ಎನಿಸುತ್ತಿದೆ . ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ ನೀಡುವುದಗಿಂತ ಅನಾವಶ್ಯಕ ವಿಷಯಗಳನ್ನು ವೈಭವಿಕರಿಸುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ . ಸರ್ಕಾರದ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೋಡಿಸುವಂತಾಗ ಬೇಕೆಂದರು .
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಮಾತು ಕಡಿಮೆ ಕೆಲಸ ಹೆಚ್ಚು ಮಾಡಿ ತಮ್ಮ ಸಾಧನೆಯನ್ನು ರಾಜ್ಯಕ್ಕೆ ಮಾದರಿಯಾಗುವಂತೆ ನಿರ್ವಹಿಸಿರುವುದು ಶ್ಲಾಘನೀಯ ಎಂದರು .
ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಪತ್ರಕರ್ತರು , ಜನಪ್ರತಿನಿಧಿಗಳು ಒಂದು ಗೂಡಿ ಕೆಲಸ ಮಾಡಿದಾಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ . ರಾಜಕಾರಣು ಸಣ್ಣಪುಟ್ಟ ತಪ್ಪುಗಳನ್ನ ಮಾಡಿದಾಗ ಅದನ್ನು ಬರವಣಿಗೆಯ ಮೂಲಕ ತಿದ್ದುವ ರಾಜಕಾರಣಿಗಳನ್ನ ಎಚ್ಚರಿಸುವ ಕೆಲಸ ಮಾಡಬೇಕೆಂದರು . ಪತ್ರಕರ್ತರು ಒಗ್ಗಟ್ಟಿನಿಂದ ಇದ್ದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಈ ಸಮ್ಮೇಳನೇ ಸಾಕ್ಷಿ ಎಂದರು .
ಮಾಲೂರು ಪಟ್ಟಣದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ ಮಾತನಾಡಿ ತಾಲೂಕು ಪತ್ರಕರ್ತರ ಸಂಘಕ್ಕೆ ನಿಯಾಮಾನುಸಾರ ನಿವೇಶವನ್ನು ನೀಡುವುದರ ಜೊತೆ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು .
ಮಾಲೂರು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ . ಲೋಕೇಶ್ ಮಾತನಾಡಿ ಪತ್ರಕರ್ತರ ಸಂಘದ ನವೀಕರಣ ಕಾಂಗಾರಿ , ಹಾಗೂ ಜಿಲ್ಲಾ ಪತ್ರಕರ್ತರ ಸಮ್ಮೇಳನಕ್ಕೆ ಕಾರಣವಾದ ತಾಲೂಕಿನ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು . ಅಲ್ಲದೆ ಮಾಲೂರು ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪತ್ರಕರ್ತರ ರಾಜಕಾರಣಿಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಎಲ್ಲಾ ಜನಪ್ರತಿನಿಧಿಗಳು ತಾಲ್ಲೂಕು ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕೃತರಾದ ಎನ್.ಮುನಿವೆಂಕಟೇಗೌಡ , ವರದಿಗಾರರಾದ ಕೆಜಿಎಫ್ನ ಶ್ರೀಧರ್ ಪಿಳ್ಳೆ ಮಾಲೂರಿನ ರಮೇಶ್ ಚಂದ್ರಪ್ರಸಾದ್ , ಕೋಲಾರದ ಸಿ.ಜಿ.ಮುರಳಿ , ಕೆ.ಗೋಪಿಕಾಮಲ್ಲೇಶ್ , ಎ.ಸದಾನಂದ , ಸಿ.ವಿ. ನಾಗರಾಜ , ಬಂಗಾರಪೇಟೆಯ ಎಸ್.ಪಿ.ವೆಂಕಟೇಶ್ , ಮುಳಬಾಗಿಲಿನ ಎ.ಅಪ್ಪಾಜೀಗೌಡ , ಶ್ರೀನಿವಾಸಮರದ ಜಿ.ಎಸ್.ಚಂದ್ರಶೇಖರ್ ಅವರಿಗೆ ಮುಖ್ಯ ಅತಿಥಿಗಳಿಂದ ಸನ್ಮಾನಿಸಲಾಯಿತು . ವೇದಿಕೆಯಲ್ಲಿ ರಾಜ್ಯ ಸಮಿತಿಯ ಸದಸ್ಯ ಡಾ.ಮಹಮ್ಮದ್ ಯೂನುಸ್ , ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ , ಉಪಾಧ್ಯಕ್ಷ ಎಂ.ಸಿ.ಮಂಜುನಾಥ್ , ಜೆ.ಜಿ ಶ್ರೀನಿವಾಸಮೂರ್ತಿ , ಕಾರ್ಯದರ್ಶಿಗಳಾದ ಅಪ್ಪಾಜಿಗೌಡ , ಶಬೀರ್ಅಹ್ಮದ್ , ಕಾರ್ಯಕಾರಿ ಸಮಿತಿ ಸದಸ್ಯರಾದ ರವಿಕುಮಾರ್ , ರವೀಂದ , ಮಲ್ಲಿಕಾರ್ಜುನಯ್ಯ , ಪ್ರಕಾಶ್ , ನಾಗರಾಜ್ , ಉಪೇಂದ್ರ , ಎಸ್.ರವಿಕುಮಾರ್ , ಎನ್.ರಾಮು , ಮಾಲೂರು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ವಿಜಯಕುಮಾರ್ , ತಾ.ಪಂ ಇ.ಓ. ವಿ.ಕೃಷ್ಣಪ್ಪ , ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಜಿ ಎ.ಜಿ.ಸುರೇಶ್ ಸ್ವಾಗತಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.