ಮೇನಾಲ (www.vknews.com) : ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಜನವರಿ 1 ರಂದು ಪೋಷಕರ ಸಭೆ ನಡೆಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಲೀಡ್ ಸಂಸ್ಥೆಯ ರೀಜನಲ್ ಕೀ ಅಕೌಂಟ್ ಮ್ಯಾನೇಜರ್ ಜಾಯೆಲ್ ವಾಸ್ ಲೀಡ್ ಸಂಸ್ಥೆ ಒದಗಿಸುವ ಶೈಕ್ಷಣಿಕ ಕಾರ್ಯಯೋಜನೆಗಳನ್ನು ಪ್ರಸ್ತುತಪಡಿಸಿದರು.
ಸಂಸ್ಥೆಯ ಸಂಚಾಲಕರಾದ ಅಬೂಬಕ್ಕರ್ ಹಾಜಿ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಪಿಯುಸಿ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ರಮ್ಲತ್.ಕೆ ಪೋಷಕರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ-ರಕ್ಷಕ ಸಮಿತಿ ಹಾಗೂ ಮಕ್ಕಳ ಸುರಕ್ಷತಾ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಹನೀಫ್ ಮಧುರಾ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಹಾಶಿಂ ಮೇನಾಲ , ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಮನೋದಾ ಸ್ವಾಗತಿಸಿ, ಶಿಕ್ಷಕಿ ಶ್ವೇತಾ ಮರಿಯಾ ಡಿಸೋಝ ವಂದಿಸಿದರು. ಶಿಕ್ಷಕ ಮುಹಮ್ಮದ್ ಅನೀಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ತಪಸ್ವಿನಿ, ಹಸ್ತಾಕ್ಷಿ, ಶಿಕ್ಷಕೇತರ ವೃಂದದವರಾದ ಖದೀಜತ್ ರೈಹಾನ, ಪ್ರತೀಕ್ಷಾ, ಇಬ್ರಾಹಿಂ ಬಡಗನ್ನೂರ್, ಶಿವಬಾಲನ್, ಅಶ್ರಫ್, ಸುಶೀಲಾ, ರಾಮ್ ಲಖನ್ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.