ಕೋಲಾರ(ವಿಶ್ವಕನ್ನಡಿಗ ನ್ಯೂಸ್): ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಗೆ ರೂ ೨೫.೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ್ ರವರಿಗೆ ನಗರಸಭೆ ಸದಸ್ಯರು ಮನವಿ ನೀಡಿದರು.
ಕೋಲಾರ ನಗರಸಭೆಯು ೩೫ ವಾರ್ಡ್ಗಳಿಂದ ಕೂಡಿದ್ದು , ೨೦೧೧ ರ ಜನಗಣತಿಯ ಪ್ರಕಾರ ೧೩೮೫೫೩ ಜನಸಂಖ್ಯೆ ಹೊಂದಿದ್ದು ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಕೋಲಾರ ನಗರಸಭೆಗೆ ಅನುದಾನಗಳು ಮಂಜೂರಾಗುತ್ತಿಲ್ಲ .
ಇದರಿಂದ ನಗರವು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸುಮಾರು ೨೬.೫೩ ಚ.ಕಿ.ಮೀ ವಿಸ್ತೀರ್ಣ ಹೊಂದಿರುತ್ತದೆ . ಈ ಪೈಕಿ ಹಲವಾರು ರಸ್ತೆಗಳು ಮಣ್ಣಿನಿಂದ ಕೂಡಿರುತ್ತದೆ . ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿಯಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿದ್ದು , ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುತ್ತದೆ.
ನಗರದಲ್ಲಿ ಸಾರ್ವಜನಿಕರು ಮುಕ್ತವಾಗಿ ಓಡಾಟ ಮಾಡಲು ಹಾಗೂ ವಾಹನಗಳು ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತಿದೆ . ಆದ್ದರಿಂದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಗೆ ರೂ ೨೫.೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.
ಇದರ ಜೊತೆಗೆ ನಗರಸಭೆ ಕಚೇರಿ ಕಟ್ಟಡಕ್ಕೆ ವಿಶೇಷ ಅನುದಾನ , ಹೆಚ್ಚುವರಿ ಸಿಬ್ಬಂದಿ , ೧೫ ನೇ ಹಣಕಾಸಿನ ಬಗ್ಗೆ ಮತ್ತು ಎಸ್.ಎಫ್.ಸಿ ಅನುದಾನದ ಬಗ್ಗೆ ಹೆಚ್ಚುವರಿ ಅನುದಾನ ನೀಡಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ್ ರವರು ಮುಂದಿನ ಬಜೆಟ್ ಅಧಿವೇಶನದಲ್ಲಿ ತಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿ ಶೀಘ್ರವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಾಜಿಯಾ ಬಾಬಾಜಾನ್ , ಭಾಗ್ಯಮ್ಮ ಜೆ.ಕೆ ಜಯರಾಮ್ , ಲಕ್ಷ್ಮೀದೇವಮ್ಮ ಕುರಿಗಳ ರಮೇಶ್ , ಜುಗುನು ಅಸ್ಲಂ , ಜುಟ್ಟು ಮಂಜುನಾಥ್ , ಪಾವನ ಜನಾರ್ಧನ್ , ಗುಣಶೇಖರ್ , ನಾ ಏಜಾಜ್ ನೂರಿ ಕಮರ್ , ರಂಗಮ್ಮ ಟಿಲ್ಲಿ ಮಂಜುನಾಥ್ , ನಿಖತ್ ಫಾತಿಮಾ ಶಾಮೀ , ಖಾಜಾ ಮೋಯುದ್ದೀನ್ , ಶಮೀವುಲ್ಲಾ ( ಚೋಟು ) , ತಾಸೀನ್ ತಾಜ್ ( ಏಜಾಜ್ ) , ಮುಖಂಡರಾದ ಅಣ್ಣಮ್ಮ ಮಹೇಂದ್ರ , ಗಣೇಶ್ ಯಾದವ್ ಇನ್ನಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.