ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) ; ಅಬುಧಾಬಿಯಲ್ಲಿ ನಿಲ್ಲಿಸಿದ್ದ ವಾಹನವೊಂದಕ್ಕೆ ಇನ್ನೊಂದು ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ತ್ರಿಶೂರ್ ಮೂಲದ ಬೇಬಿ ಬಾಪು ಹಾಜಿ ಅವರ ಮಗ ಅಬ್ದುಲ್ ರಝಾಕ್ (41) ನಿಧನರಾದರು. ಅಬುಧಾಬಿ ಮುಸಾಫಾ ಮೊಹಮ್ಮದ್ ಬಿನ್ ಜಾಯೆದ್ ನಗರದಲ್ಲಿ ಈ ಘಟನೆ ನಡೆದಿದೆ.
ವಾಹನ ನಿಲ್ಲಿಸಿದ ಬಳಿಕ ವಾಹನದ ಬಾಗಿಲು ಮುಚ್ಚಿದೆಯಾ ಎಂದು ಅನುಮಾನಗೊಂಡ ಅಬ್ದುಲ್ ರಝಾಕ್, ಬಾಗಿಲು ಪರಿಶೀಲಿಸುತ್ತಿರುವಾಗ ಮತ್ತೊಂದು ವಾಹನವು ಬಂದು ತನ್ನ ವಾಹನದ ಬಾಗಿಲಿಗೆ ಡಿಕ್ಕಿ ಹೊಡೆಯಿತು ಈ ಸಂದರ್ಭದಲ್ಲಿ ಅಬ್ದುಲ್ ರಜಾಕ್ ಸ್ಥಳದಲ್ಲೇ ನಿಧನರಾದರು.
ಅಬ್ದುಲ್ಎಂ ರಜಾಕ್ ಕಳೆದ ಎಂಟು ವರ್ಷಗಳಿಂದ ಅಬುಧಾಬಿಯ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಪತ್ನಿ, ಮೂರು ಮಕ್ಕಳನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.