ಕುಂಬ್ರ (www.vknews.in) : ಎಸ್ಎಸ್ಎಫ್ ಕುಂಬ್ರ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಸೆಕ್ಟರ್ ಅಧ್ಯಕ್ಷರಾದ ಶಮೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಕಟ್ಟತ್ತಾರು ಸುನ್ನೀ ಸೆಂಟರಿನಲ್ಲಿ ನಡೆಯಿತು. ಇಸ್ಮಾಯಿಲ್ ಹನೀಫಿ ಚೆನ್ನಾರ್ ಸಭೆಯನ್ನು ಉದ್ಘಾಟಿಸಿದರು. ಕುಂಬ್ರ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಗಟ್ಟಮನೆ 2021 ನೇ ಸಾಲಿನ ವರದಿ ಹಾಗೂ ಲೆಕ್ಕ ಪತ್ರ ವಾಚಿಸಿದರು. ಬಳಿಕ 2022 ನೇ ವರ್ಷಕ್ಕೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಲ್ಯಾಸ್ ಕಟ್ಟತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಗಟ್ಟ ಮನೆ, ಕೋಶಾಧಿಕಾರಿಯಾಗಿ ರಫೀಕ್ ಪರಾಡ್, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಅನಸ್ ನೇರೊಳ್ತಡ್ಕ, ದಅವಾ ಕಾರ್ಯದರ್ಶಿಯಾಗಿ ನೌಫಲ್ ಹಿಮಮಿ ಸಖಾಫಿ , ವಿಸ್ಡಂ ಕಾರ್ಯದರ್ಶಿಯಾಗಿ ಶಫೀಕ್ ಕೊಳ್ತಿಗೆ, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಅಸ್ಕರ್ ಮೈದಾನಿಮೂಲೆ, ಕಲ್ಚರಲ್ ಕಾರ್ಯದರ್ಶಿಯಾಗಿ ಇಸಾಕ್ ಮಾಡಾವು, ರೈನ್ಬೊ ಕಾರ್ಯರ್ಶಿಯಾಗಿ ಸಿರಾಜ್ ತಿಂಗಳಾಡಿ, ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಶಹೀಮ್ ಅರಿಕ್ಕಿಲ, ಮೀಡಿಯಾ ಕಾರ್ಯದರ್ಶಿಯಾಗಿ ಸಹದ್ ತಿಂಗಳಾಡಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮೀತಿ ಸದಸ್ಯರಾಗಿ ಮುಸ್ತಫ ಗಟ್ಟಮನೆ, ಶರಫುದ್ದೀನ್ ಗಟ್ಟಮನೆ, ಆಶಿಕ್ ಉಜಿರೋಡಿ, ಅಶ್ಫಾಕ್ ಮುಸ್ಲಿಯಾರ್ ಕಟ್ಟತ್ತಾರು, ಆಬಿದ್ ಕುಯ್ಯಾರ್, ಸಿದ್ದೀಕ್ ಕಲ್ಪನೆ, ಅಬ್ದುಲ್ ರಹಿಮಾನ್ ಸಖಾಫಿ, ಹನೀಫ್ ಹಿಮಮಿ, ಸುಹೈಲ್ ಮಾಡಾವು, ಮುನಾಝ್ ಚೆನ್ನಾರ್, ನುಹೈಮಾನ್ ಚೆನ್ನಾರ್, ಮುಕ್ತಾರ್ ಕೊಳ್ತಿಗೆ, ಇಸ್ಮಾಯಿಲ್ ಅಮ್ಚಿನಡ್ಕ, ಅಬ್ದುಲ್ ಖಾದರ್ ಅಮ್ಚಿನಡ್ಕ ರವರನ್ನು ಎಸ್ಎಸ್ಎಫ್ ಪುತ್ತೂರು ಡಿವಿಝನ್ ಅಧ್ಯಕ್ಷರಾದ ತೌಸೀಫ್ ಅಸ್-ಅದಿ ಯವರ ವೀಕ್ಷಣೆಯಲ್ಲಿ ಆಯ್ಕೆ ಮಾಡಲಾಯಿತು.
ಪುತ್ತೂರು ಡಿವಿಝನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಅಡ್ಕ, ಮುಹ್ಸಿನ್ ಕಟ್ಟತ್ತಾರು ಹಾಗೂ ಕುಂಬ್ರ ಸೆಕ್ಟರ್ ವ್ಯಾಪ್ತಿಯ 12 ಶಾಖೆಗಳಿಂದ ಬಂದ ಕೌನ್ಸಿಲರ್’ಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ದನ್ಯವಾದ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.