ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ಅದೆಷ್ಟೋ ಜನ ಮನಸ್ಸುಗಳ ಒಳಿತಿನ ಹಾದಿಗೆ ದಾರಿದೀಪವಾಗಿ ನಿಂತ ಪ್ರಕಾಶಮಯ ಮಜ್ಲಿಸ್ ನೂರೇ ಅಜ್ಮೀರ್ ಕಾರ್ಯಕ್ರಮ ನಾಳೆ ಸೈಯದ್ ಮದನಿ ಮಣ್ಣಿನಲ್ಲಿ ನಡೆಯಲಿದೆ.
ಇಲಾಹನ ಸೂರ್ಯನು ಅಸ್ತಮಿಸುವ ಮುಂಚಿನ ವೇಳೆ ದುಆ ಗೆ ಉತ್ತರ ಲಭಿಸುವ ಮಹತ್ತರ ಸಮಯದಲ್ಲಿ. ಅದೆಷ್ಟೋ ಪುಣ್ಯ ಕಾರ್ಯಗಳು ಈ ಮಜ್ಲಿಸ್ ಮುಖಾಂತರ ನಡೆಯುವಾಗ ಲಕ್ಷೋಪಲಕ್ಷ ಮುಸ್ಲಿಮರು ಭಾಗವಹಿಸುವರು. ಈ ಮಜ್ಲಿಸ್ ಪುಣ್ಯ ಕರಗತ ಮಾಡಿದವರದೆಷ್ಟೋ ಜನರು ತಮ್ಮ ಜೀವನದ ಹಾದಿಯನ್ನೇ ಬದಲಾಯಿಸಿದ್ದಾರೆ.
ಬೆಳಗ್ಗೆ ಸೂರ್ಯನು ಉದಯಿಸಿದ ನಂತರ ಅದೆಷ್ಟೋ ಜನರು ನಿದ್ರೆಯಿಂದ ಎಚ್ಚೆತ್ತು ನಮಾಝ್ ಅದೇನೂ ಇಲ್ಲದೆ ತಮ್ಮ ದಿನ ನಿತ್ಯ ಪ್ರಾರಂಭಿಸುತ್ತಿದ್ದರು. ಆದರೆ ಇಂತಹಾ ಅನೇಕ ಮಜ್ಲಿಸ್ ಗಳು ಈಗ ಜನ ಮನಸುಗಳನ್ನು ಬದಲಾಯಿಸಿದೆ. ಧಾರವಾಹಿ,ರಿಯಾಲಿಟಿ ಶೋ, ಎಂದೆಲ್ಲಾ ಮುಗಿಬಿದ್ದು ಟಿವಿ ನೋಡುತ್ತಿದ್ದ ಅದೆಷ್ಟೋ ಸಹೋದರ ಸಹೋದರಿಗಳು ತಮ್ಮ ಜೀವನದ ಶೈಲಿ ಬದಲಾಯಿಸಿದ್ದಾರೆ. ಅದಕ್ಕೆಲ್ಲ ಮುಖ್ಯ ಕಾರಣ ಇಂತಹಾ ಮಜ್ಲಿಸ್ ಗಳು.
ಇನ್ನೂ ಅನೇಕ ಯುವ ಸಮೂಹಗಳು ತಮ್ಮ ನಡೆ ನುಡಿಗಳನ್ನು ಬದಲಾಯಿಸಿ ಸುಳ್ಳು, ಬೈಗುಳ,ಇತ್ಯಾದಿ ಹೇಳುತ್ತಿದ್ದ ಬಾಯಿಗಳು ಇಂದು ಝಿಕ್ರ್ ಸ್ವಲಾತ್ ನಲ್ಲಿ ಮುಳುಗಿದೆ. ಪ್ರೀತಿಯ ಸತ್ಯ ವಿಶ್ವಾಸಿಗಳೇ ಇಂತಹಾ ಮಜ್ಲಿಸ್ ಗಳಿಗೆ ಭಾಗಿಯಾಗೋಣ ಅದರ ಪುಣ್ಯ ಕರಗತ ಮಾಡೋಣ.
ನಾಳೆ ಸೈಯದ್ ಮದನಿ ಮಣ್ಣಿನಲ್ಲಿ ನಡೆಯುವ ನೂರೇ ಅಜ್ಮೀರ್ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶ್ವಸಿಗೊಳಿಸೋಣ..
✍️ ಆದಂ ದಾರಿಮಿ, ತೆಕ್ಕಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.