(www.vknews.in) : ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನ ವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರಮ್ಲತ್.ಕೆ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಶಿಕ್ಷಕ ಮುಹಮ್ಮದ್ ಅನೀಸ್, ಶಿಕ್ಷಕಿಯರಾದ ತಪಸ್ವಿನಿ, ಮನೋದ, ಶ್ವೇತಾ ಮರಿಯಾ ಡಿಸೋಝ ವಿವಿಧ ರೀತಿಯ ಯೋಗಾಸನಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಅದೇ ರೀತಿ ವಿದ್ಯಾರ್ಥಿಗಳು ಯೋಗದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ನಝೀರ್ ಅಹಮ್ಮದ್, ಶಿಕ್ಷಕಿಯರಾದ ರಾಬಿಯಾ, ಪ್ರತೀಕ್ಷಾ, ಫಾತಿಮತ್ ಝಿಯಾನ, ಹಸ್ತಾಕ್ಷಿ, ಭವ್ಯಾಮಣಿ ಉಪಸ್ತಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.