ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರವು ಈದ್ ಅಲ್-ಅದ್ಹಾ ವಾರಾಂತ್ಯಕ್ಕೆ ಸಂಬಂಧಿಸಿದಂತೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಪ್ರಕಟಿಸಿದೆ. ಬಲಿಪೆರುನ್ನಾಳ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಮೊದಲು ಪಿಸಿಆರ್ ಪರೀಕ್ಷೆ ಮಾಡಿಸಿ ಕೋವಿಡ್ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು 72 ಗಂಟೆಗಳ ಒಳಗೆ ಕೋವಿಡ್ ಪಿಸಿಆರ್ ಪರೀಕ್ಷೆಯ ಫಲಿತಾಂಶವನ್ನು ಹಾಜರುಪಡಿಸಬೇಕು. ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈದ್ ಪ್ರಾರ್ಥನೆ ಮತ್ತು ಖುತ್ಬಾವನ್ನು 20 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಪ್ರಾರ್ಥನೆಗೆ ಬರುವವರು ಪ್ರಾರ್ಥನಾ ಚಾಪೆ (ಮುಸಲ್ಲಾ) ತರಬೇಕು. ಮಾಸ್ಕ್ ಧರಿಸಬೇಕು ಮತ್ತು ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಹಸ್ತಲಾಘವ ಅಥವಾ ಅಪ್ಪುಗೆ ಇಲ್ಲ. ಬಲಿಪೆರುನಾಳ್ ಆಚರಣೆಯ ನಿಮಿತ್ತ ಜುಲೈ 8 ರಿಂದ 11 ರವರೆಗೆ ರಜೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.