ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): “ಉದ್ಯೋಗ ನಿಮಿತ್ತಂ ಬಹುಕೃತ ವೇಶಂ” ಎಂಬ ಸಂಸ್ಕೃತ ಭಾಷೆಯ ಸುಂದರ ಅರ್ಥವತ್ತಾದ ನಾಣ್ಣುಡಿಯಂತೆ… ಹೊಟ್ಟೆಪಾಡಿಗಾಗಿ ಹಾಗೂ ತನ್ನ ಕುಟುಂಬ ಸಲಹುವ ಮಹತ್ತಾದ ಜವಾಬ್ದಾರಿಯ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ತಾಯ್ನಾಡು ಭಾರತವನ್ನು ಭಾರವಾದ ಮನಸ್ಸಿನೊಂದಿಗೆ ಬೀಳ್ಕೊಟ್ಟು ಗಲ್ಫ್ ವಿಮಾನ ಹತ್ತಿದ ಸುನ್ನಿ ಹೃದಯಿಗಳ ಕನಸಿನ ಕೂಸೇ ಕೆ.ಸಿ.ಎಫ್ ತನ್ನ ದುಡಿಮೆಯ ವರಮಾನದಿಂದ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾ ಅದರೊಂದಿಗೆ ಈ ಸಮಾಜಕ್ಕೆ, ಬಡವರಿಗೆ ನಿರ್ಗತಿಕರಿಗೆ ತಮ್ಮಿಂದಾಗುವ ಸಹಾಯವನ್ನು ರಾಜಕೀಯ ರಹಿತವಾಗಿ ನೀಡುವುದರಲ್ಲಿ ಕೆ.ಸಿ.ಎಫ್ ಸಂಘಟನೆ ಮೊದಲನೇ ಸ್ಥಾನದಲ್ಲಿದೆ ಅಂದ್ರೆ ಅತಿಶಯೋಕ್ತಿ ಆಗದು.
ಇನ್ನು ವಿಷಯಕ್ಕೆ ಬರೋಣ… ಕೆ.ಸಿ.ಎಫ್ ಯು.ಎ.ಇ ಘನ ಅಧ್ಯಕ್ಷರಾದ ಬಹುಮಾನ್ಯರಾದ ಕೆದುಂಬಾಡಿ ಇಬ್ರಾಹಿಂ ಸಖಾಫಿ ಉಸ್ತಾದರ ನೇತೃತ್ವದಲ್ಲಿ 50 ಮಂದಿಯನ್ನೊಳಗೊಂಡ ಒಂದು ಈದ್ ಝಿಯಾರತ್ ಟೂರ್ ಹೋಗುವುದೆಂದು KCF ದುಬೈ ಸೌತ್ ಝೋನ್ ನಾಯಕರು ತೀರ್ಮಾನಿಸಿದರು. ಆಯ್ದುಕೊಂಡ ಆಯ್ಕೆ ಮಾತ್ರ ಸರಿಯಾಗಿಯೇ ಇತ್ತು. ಅದು ಖುರ್ ಆನ್ ಸುಂದರ ಚರಿತ್ರೆಯಾಗಿ ಪ್ರಶಂಸಿಸಿದ ಮಹಾತ್ಮರಾದ ಅಂಬಿಯಾಗಲು, ಪುಣ್ಯ ಸ್ವಹಾಬಿಗಳ, ಅವುಲಿಯಾ ಸ್ವಾಲಿಹೀಗಳ ಪವಿತ್ರ ಮಕ್ಬರಗಳನ್ನೊಳಗೊಂಡ ಐತಿಹಾಸಿಕ ಚಾರಿತ್ರಿಕ ಪುಣ್ಯ ಭೂಮಿ ಒಮಾನ್ ಸಲಾಲ ಆಗಿತ್ತು.
KCF ನ ಪ್ರಗಲ್ಬ ರ ನೇತೃತ್ವದಲ್ಲಿ ಒಮಾನ್ ಯಾತ್ರೆಯೂ ದಿನಾಂಕ 7-7-22 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿಯು ಐಷಾರಾಮಿ ಬಸ್ ನಲ್ಲಿ ಸೃಷ್ಟಿಕರ್ತನ ನಾಮದೊಂದಿಗೆ, ಸೃಷ್ಟಿಕರ್ತನಲ್ಲಿ ಭರವಸೆಯಿಟ್ಟು ಮಹಾತ್ಮರನ್ನು ಸ್ಮರಿಸುತ್ತ ಯಾತ್ರೆ ಒಮಾನ್ ಕಡೆ ಹೊರಟೆ ಬಿಟ್ಟಿತು… ಯಾತ್ರೆಯುದ್ದಕ್ಕೂ ಯಾವೊಬ್ಬ ಯಾತ್ರಿಕನಿಂದಲೂ ಒಂದು ಸಣ್ಣ ಕರಾಹತ್ ಮಾಡಲೂ ಕೂಡಾ ಅವಸರ ನೀಡದ ನೇತೃತ್ವ.. ಝಿಕ್ರ್ ಸ್ವಲಾತ್, ನೊಂದಿಗೆ ಪ್ರತಿಯೊಬ್ಬ ಯಾತ್ರಾರ್ಥಿಯ ಮನಸ್ಸನ್ನು ಸಂಪೂರ್ಣ ಅಲ್ಲಾಹನೆಡೆಗೆ ತಿರುಗಿಸಲು ಯಶಸ್ವಿಯಾಯಿತು… ಪ್ರವಾದಿ ಪ್ರಕೀರ್ತನೆಗಳ ಮೂಲಕ ನಮ್ಮನ್ನು ಮದೀನದತ್ತ ಕೊಂಡೊಯ್ದ ಅಬ್ದುಲ್ ರಶೀದ್ ಹನೀಫಿ ಉಸ್ತಾದ್ ಬೆಳ್ಳಂಬೆಳಿಗ್ಗೆ ಅಸ್ಮಾಉಲ್ ಹುಸ್ನ ಪಠಿಸಿ ಕೊಟ್ಟ ಶಾಹುಲ್ ಹಮೀದ್ ಸಖಾಫಿ ಉಸ್ತಾದ್ ಸಂದರ್ಭಕ್ಕನುಸಾರವಾಗಿ ಚರಿತ್ರೆಗಳ ತರಗತಿಗಳನ್ನು ನಡೆಸಿ ಕೊಟ್ಟ ವಿವಿದ ಉಸ್ತಾದದರುಗಳು ಇದಕ್ಕೂ ಮಿಕ್ಕಿ ಯಾತ್ರೆಗೆ ನೇತೃತ್ವ ನೀಡುವ ಅಮೀರ್ … ಇನ್ನೇನು ಬೇಕು….. ಈ ದುನಿಯಾದಲ್ಲಿ ಮತ್ತು ಆಖಿರಾದಲ್ಲಿ. ಅಲ್ಲಾಹನು ಖಬೂಲ್ ಮಾಡಲಿ ಆಮೀನ್.
ಅಲ್ಲಾಹನ ದಯೆಯೊಂದಿಗೆ ಯಾತ್ರಾ ಬಸ್ಸು ಚಾರಿತ್ರಿಕ ಧನ್ಯ ಭೋಮಿ ಒಮಾನ್ ತಲುಪಿಯೇ ಬಿಟ್ಟಿತು. ಪ್ರತಿಯೊಬ್ಬ ಯಾತ್ರಾರ್ಥಿಯ ಮನದಲ್ಲಿ ಒಂದು ಕುಳಿರ್ಗಾಳಿ, ರೋಮಾಂಚನ,, ಇದು ಕನಸೋ ನನಸೋ ಎಂದು… ಯಾಕೆಂದರೆ ನಾವೆಲ್ಲ.. ತಲುಪಿದ್ದು ಕಾಲಿಟ್ಟ ಮಣ್ಣು ಪವಿತ್ರ ಖರ್ಆನಿನಲ್ಲಿ ಅಲ್ಲಾಹು ಪ್ರಶಂಸಿಸಿದ ಮಹಾತ್ಮರುಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಪವಿತ್ರ ಚಾರಿತ್ರಿಕ ಮಣ್ಣಾದ ಒಮಾನ್ ದೇಶಕ್ಕೆ ನಾವು ತಲುಪಿದ್ದೇವೆ…ನಮಗರಿವಿಲ್ಲದೆ ನಮ್ಮ ನಾಲಗೆ ಪಠಿಸಿತು… ಅಲ್ ಹಮ್ದುಲಿಲ್ಲಾಹ್….
ಅಷ್ಟರಲ್ಲಿ ನಮ್ಮ ಯಾತ್ರೆಗೆ ಇನ್ನೊಂದು ಮೆರುಗು ಸಿಕ್ಕಿತು ಅದೇನೆಂದರೆ ಕೆ.ಸಿ.ಎಫ್ ಒಮಾನ್ ಇಹ್ಸಾನ್ ಓರ್ಗನೈಝರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಲಂದರ್ ಬಾವ ಉಸ್ತಾದ್ ಪರಪ್ಪು ನಮ್ಮೊಂದಿಗೆ ಸೇರಿ ಕೊಂಡರು.. ನಂತರ ನಮ್ಮ ಯಾತ್ರೆ ಇನ್ನಷ್ಟು ಸುಲಭವಾಯಿತು. ಒಮಾನ್ ನ ಯಾತ್ರಾ ಸ್ಥಳದ ಮುಕ್ಕುಮೂಲೆಗಳನ್ನು, ಅದರ ಚರಿತ್ರೆಗಳನ್ನು ಬಲ್ಲವರಾಗಿದ್ದಾರೆ ಈ ಕಲಂದರ್ ಉಸ್ತಾದ್….ಬರೆಯುವಾಗ ಕಲಂದರ್ ಉಸ್ತಾದರ ಹಿನ್ನೆಲೆಯನ್ನು ಸ್ವಲ್ಪ ಬರೆಯಬೇಕು ಅನ್ನಿಸಿತು… ಇವರು ಕಡು ಬಡ ಕುಟುಂಬದ ಆಲಿಮ್ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ವಿದ್ಯಾಭ್ಯಾಸ ಪಡೆದು… ಕಲಿಕಾ ಸಮಯದ ರಂಜಾನ್ ಇನ್ನಿತರ ರಜಾದಿನಗಳಲ್ಲಿ ಧರ್ಮದ ಗಂಧಗಾಳಿ ಗೊತ್ತಿಲ್ಲದ ಕರ್ನಾಟಕ ದ ಉತ್ತರ ಭಾಗಗಳಲ್ಲಿ ದೀನಿ ಕಂಪನ್ನು ಪಸರಿಸಲು ಇವರ ಪಾಲು ಕೂಡಾ ಇತ್ತು ಅನ್ನುವುದನ್ನು ಇಲ್ಲಿ ಬರೆಯಲೇಬೇಕೆನಿಸಿತು.. ಸ್ವಭಾವದಲ್ಲಿ ಉತ್ತಮ ಗುಣನಡತೆ ಇವರದ್ದು. ಅದರೊಂದಿಗೆ ಕೋಪ ಅಸೂಯೆ ಎಂಬ ಎರಡು ಪದಗಳು ಇವರ ಜೀವನ ಎಂಬ ನಿಘಂಟಿನಲ್ಲಿ ಖಂಡಿತ ಕಾಣಲು ಸಿಗದು.
ಒಮಾನ್ ಸಲಾಲ ಯಾತ್ರೆಯುದ್ದಕ್ಕೂ ಇವರ ಗೈಡ್ ಲೈನ್ ಅಚ್ಚುಕಟ್ಟಾದ ಅರ್ಥಗರ್ಭಿತ ವಿವರಣೆ, ಪುಣ್ಯಸ್ಥಳಗಳ ಬಗೆಗಿನ ಚರಿತ್ರಯೊಂದಿಗಿನ ವಿವರಣೆ.. ಯಾತ್ರಾರ್ಥಿಗಳು ಮತ್ತೆ ಮತ್ತೆ ಕೇಳುವ ಪ್ರಶ್ನೆಗಳಿಗೆ ಮಂದಹಾಸಯುಕ್ತ ತಾಳ್ಮೆಯ ಉತ್ತರ, ಅಚ್ಚುಕಟ್ಟಾದ ಆಹಾರ ವಸತಿಗೆ ವ್ಯವಸ್ಥೆ ಇವನ್ನೆಲ್ಲಾ ನಿಸ್ವಾರ್ಥತೆಯಿಂದ ಮಾಡಿಕೊಟ್ಟ.ಕಲಂದರ್ ಬಾವ ಉಸ್ತಾದ್.. ಇನ್ನೇನು ಬೇಕು ಯಾತ್ರಾರ್ಥಿಗಳ ಮನಗೆಲ್ಲಲು…. ಅಲ್ಲಾಹು ಅವರನ್ನು ಅನುಗ್ರಹಿಸಲಿ ಆಮೀನ್.
ನಾವು ಯಾತ್ರೆ ಮಾಡಿದ ಪುಣ್ಯ ಸ್ಥಳಗಳು ಖುರ್ ಆನಿನಲ್ಲಿ ಅಲ್ಲಾಹು ಪ್ರಸ್ತಾಪಿಸಿದ ಪ್ರವಾದಿಗಳಾದ *ಹಝ್ರತ್ ಹೂದ್ ನಬಿ (عليه السلام) ಹಝ್ರತ್ ಸ್ವಾಲಿಹ್ ನಬಿ (عليه السلام), ಹಝ್ರತ್ ಅಯೂಬ್ ನಬಿ (عليه السلام)” ಹಝ್ರತ್ ಇಮ್ರಾನ್ ನಬಿ (عليه السلام) ಪ್ರಮುಖ ವಾದುದು… ಪ್ರವಾದಿ ಅಯ್ಯೂಬ್ ನೆಬಿ (عليه السلام) ರವರ ರೋಗ ಶಮನಗೊಂಡ ಪುಣ್ಯ ಕೊಳದಲ್ಲಿ ನಾವು ಸ್ನಾನ ಮಾಡಿ ನೀರು ಕುಡಿದು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು ಅಲ್ಹಂದುಲಿಲ್ಲಾಹ್!!
ಸ್ವಹಾಬಿ ವರೇಣ್ಯರಾದ ಆಶಿಖುರ್ರಸೂಲ್ ಉವೈಸುಲ್ ಖರ್ನಿ(رضي الله عنه), ಅದುಮಿಡಲಾಗದ ಪ್ರವಾದಿ ಪ್ರೇಮದಿಂದಾಗಿ ಮದೀನದತ್ತ ಮುಖ ಮಾಡಿ ನಿಂತ ಖಬರ್ ಶರೀಫ್ ಝುಹೈರ್ ಬಿನ್ ಖಲ್ರಮಿ (رضي الله عنه) ಮಿರ್ಬಾತ್ ನಾವು ದಿನ ನಿತ್ಯ ಪಠಿಸುವ ಹದ್ದಾದ್ ರಾತೀಬನ್ನು ರಚಿಸಿದ್ ಹದ್ದಾದ್ (رضي الله عنه) ರವರ ಮುತ್ತಾತ ಸ್ವಾಹಿಬುಲ್ ಮಿರ್ಬಾತ್ ಮುಹಮ್ಮದ್ ಬಿನ್ ಅಲಿ ಬಅಲವಿ (رضي الله عنه), ಹೂದ್ ನೆಬಿ ಯವರ ಮಗನಾದ ಆಬಿರ್ ಬಿನ್ ಹೂದ್ (رضي الله عنه) ಬಲ್ಕೀಸ್ ರಾಣಿಯ ಸಿಂಹಾಸನವನ್ನು ಮೈಕ್ರೊ ಸೆಕೆಂಡ್ ನಲ್ಲಿ ಸುಲೈಮಾನ್ ನೆಬಿ عليه السلام ಸನ್ನಿದಿಗೆ ತಲುಪಿಸಿದ ಆಶಫ್ ಬಿನ್ ಬರ್ಖೀಯ (رضي الله عنه) ಅಹ್ಮದ್ ಕಬೀರು ರಿಫಾಯಿ (رضي الله عنه) ರವರ ಮೂರು ಮುರೀದರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಸ್ಜಿದ್ ಸ್ವಾಹಿಬು ಹಳ್ರ ಹಾಗೂ ಜೊತೆಗೆ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ದಕ್ಷಿಣ ಭಾರತದಲ್ಲಿ ಇಸ್ಲಾಂ ಪಸರಿಸಲು ಪ್ರಧಾನ ಕಾರಣೀಕರ್ತರಾದ ಕೇರಳದ ಅಂದಿನ ರಾಜರಾಗಿದ್ದ ಚರುಮಾನ್ ಪೆರುಮಾಳ್ ಪ್ರವಾದಿ ಮುಹಮ್ಮದ್ ﷺ ರವರ ಸನ್ನಿದಿಯಲ್ಲಿ ಇಸ್ಲಾಂ ಸ್ವೀಕರಿಸಿ ತಾಜುದ್ದೀನ್ ಅಬೂಬಕ್ಕರ್(رضي الله عنه) ಆಗಿ ಈಗ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಸ್ಥಳವಂತೂ ನಯನ ಮನೋಹರ.
ಜಿನುಗು ಇಬ್ಬನಿ ಮಳೆ ಮಿಶ್ರಿತ ತಂಪಾದ ಅಂತರೀಕ್ಷ.. ಅದಕ್ಕೆ ಇನ್ನಷ್ಟು ಕಳೆ ನೀಡುವ ಮನಕ್ಕೆ ಮುದ ನೀಡುವ ತೆಂಗು ಬಾಳೆ ಕೃಷಿ.. ಸಂಪೂರ್ಣ ಹಚ್ಚಹಸುರಿನ ಒಂದು ತರ ಕೇರಳದ ಪ್ರಕೃತಿ ಸೌಂದರ್ಯ.. ಸಂಪೂರ್ಣ ಮರಳುಗಾಡುಗಳ ನಡುವೆ ಇಂತಹ ಪ್ರಕೃತಿ ವಿಸ್ಮಯಗಳು ಅಲ್ಲಾಹನ ಅದ್ಬುತ ನಿದರ್ಶನಗಳಲ್ಲೊಂದು .. ಚೇರಮನ್ ಪೆರುಮಾಳ್ ತಾಜುದ್ದೀನ್ ಅಬೂಬಕ್ಕರ್ ರವರ ಅಂತ್ಯಾಭಿಲಾಷೆಯಂತೆ ಇಲ್ಲಿ ಮಾತ್ರ ಕೇರಳದ ಪ್ರಕೃತಿ ಸೊಬಗು ಇದೆ ಇದು ಅಲ್ಲಾಹನು ಮಹಾತ್ಮರ ಪ್ರಾರ್ಥನೆಯನ್ನು ಸ್ವೀಕಾರ ಮಾಡುವುದಕ್ಕೆ ಹಾಗೂ ಅಲ್ಲಾಹನಿಗೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಉತ್ತಮ ನಿದರ್ಶನ.
ಕೊನೆಯದಾಗಿ ತಲುಪಿದ್ದು ಮಸ್ಕತ್ ಸಮಾಯಿಲ್ ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಒಮಾನಿನ ಪ್ರಥಮ ಮುಸ್ಲಿಂ ಸ್ವಹಾಬಿ ಮಾಝಿನ್ ಬಿನ್ ಗಳೂಬ (رضي الله عنه) ರ ಪಾವನ ಸನ್ನಿದಿಗೆ ಖರ್ಜೂರ ತೋಟ ಹಾಗು ವರ್ಷಪೂರ್ತಿ ಹರಿಯುತ್ತಿರುವ ಕಿರಿದಾದ ನೀರಿನ ಹರಿವುಗಳ ಮಧ್ಯ ಇರುವ ಪ್ರಕೃತಿ ರಮಣೀಯತೆಯ ತಾಣ ಪ್ರತ್ಯೇಕ ಆತ್ಮಾನುಭೂತಿ ಆ ಪವಿತ್ರ ದರ್ಬಾರಿನಲ್ಲಿ ನಮಗೆ ಗೋಚರಿಸಿದೆ ಅಲ್ಹಂದುಲಿಲ್ಲಾಹ್.
ಅಂತೂ ಇಂತೂ ಅ ಪುಣ್ಯ ನಿಮಿಷಗಳು ಕಳೆದದ್ದೇ ಗೊತ್ತಾಗಲಿಲ್ಲ… ಅ ಪುಣ್ಯ ಮಹಾತ್ಮರುಗಳನ್ನು, ಅ ಪುಣ್ಯ ಭೂಮಿಯನ್ನು, ಅದರೊಂದಿಗೆ ಯಾತ್ರೆಯುದ್ದಕ್ಕೂ ನಮ್ಮೊಂದಿಗೆ ಸಹಕರಿಸಿದ ಕಲಂದರ್ ಉಸ್ತಾದರನ್ನು, ಒಲ್ಲದ ಮನಸ್ಸಿಂದ ಭಾರವಾದ ಹೃದಯದಿಂದ ಬೀಳ್ಕೊಟ್ಟು, ಅತ್ಯುತ್ತಮ ಯಾತ್ರಾ ನೇತೃತ್ವ ಕೊಟ್ಟ KCF ದುಬೈ ಸೌತ್ ಝೋನ್ ಗೆ ದುವಾ ಮಾಡುತ್ತಾ… ಅಲ್ಲಾಹನ ಅಪಾರ ದಯೆಯಿಂದ ಯಾವುದೇ ವಿಘ್ನಗಳಿಲ್ಲದೆ ಸುರಕ್ಷಿತವಾಗಿ ನಮ್ಮ ಪವಿತ್ರ ಕರ್ಮ ಭೂಮಿಯಾದ ದುಬೈ ತಲುಪಿದೆವು ಅಲ್ ಹಮ್ದುಲಿಲ್ಲಾಹ್…
ಯಾತ್ರೆಯ ವಿಜಯಕ್ಕಾಗಿ ಅಹರ್ನಿಶಿಯಾಗಿ ದುಡಿದ ಕೆ.ಸಿ.ಎಫ್ ದುಬೈ ಸೌತ್ ಝೋನ್ ನ ಪ್ರತಿಯೊಬ್ಬ ನಾಯಕರಿಗೂ ಯಾತ್ರಾ ನಾಯಕರಿಗೂ ಅಲ್ಲಾಹನು ಅರ್ಹವಾದ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ ಆಮೀನ್.
✍️ಯಾತ್ರಾ ಅನುಭವ ; ನಾಸಿರ್ ಪರಪ್ಪು. (ಅಧ್ಯಕ್ಷರು. KCF ದುಬೈ ಅಲ್ ಕೂಜ್ ಸೆಕ್ಟರ್)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.