ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರಿನ ಮಿಸ್ರಿಯಾ ಬಾನು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂಲತಃ ಮೂಡಬಿದ್ರೆ ನಿವಾಸಿಯಾಗಿರುವ ಮಿಸ್ರಿಯಾ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೂಡಬಿದ್ರೆ ಯ ಜೈನ್ ಶಿಕ್ಷಣ ಸಂಸ್ಥೆಯಲ್ಲಿ ಪೂರ್ತಿಗೊಳಿಸಿದರು.
ಪಿಯುಸಿ ಮತ್ತು ಬಿಕಾಂ ಪದವಿಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದರು. ಕಳೆದ ಮೇ ತಿಂಗಳಲ್ಲಿ ಸಿಎ ಉಮೇಶ್ ರಾವ್ ಅವರ ತರಬೇತಿಯಲ್ಲಿ ಸಿಎ ವಿದ್ಯಾಭ್ಯಾಸ ಮುಗಿಸಿದರು.
ಬಜ್ಪೆ ಕಿನ್ನಿಪದವು ನಿವಾಸಿ ಮುಹಮ್ಮದ್ ಹುಸೇನ್ ಫಹದ್ ಅವರ ಪತ್ನಿಯಾಗಿರುವ ಮಿಸ್ರಿಯಾ ಬಾನು, ಮೂಡಬಿದ್ರೆಯ ಗುಜರಿ ವ್ಯಾಪಾರಿ ಅಯ್ಯೂಬ್ ಮತ್ತು ಖತೀಜಾ ಬಾನು ದಂಪತಿಯ ಪುತ್ರಿಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.