ಮಂಗಳೂರು (www.vknews.in) ; ಇಲ್ಲಿನ ನೆಹರು ಮೈದಾನದಲ್ಲಿ ನಡೆದ 24 ನೇ ಇಂಡಿಪೆಂಡನ್ಸ್ ಟ್ರೋಫಿ ಫುಟ್ಬಾಲ್ ಪಂದ್ಯದಲ್ಲಿ ತಲಪಾಡಿ ಫಲಾಹ್ ಕಿರಿಯ ಪ್ರಾಥಮಿಕ ಶಾಲೆ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಪಂದ್ಯಾಟದಲ್ಲಿ 35 ತಂಡಗಳು ಭಾಗವಹಿಸಿದ್ದವು.
5 ಪಂದ್ಯ ಆಡಿ ಫೈನಲ್ ನಲ್ಲಿ ಬಲಿಷ್ಠ ತಂಡವಾದ ಮೋರ್ನಿಂಗ್ ಸ್ಟಾರ್ ಬಜ್ಪೆ ವಿರುದ್ಧ ಪೆನಾಲ್ಟಿ ಶೂಟ್ ಔಟ್ ನಲ್ಲಿ 3-1ಅಂತರದಲ್ಲಿ ಜಯಶಾಲಿಯಾಗಿ ಹೊರ ಹೊಮ್ಮಿತು.
ತಂಡದಲ್ಲಿ ರೈಯಾನ್ (ನಾಯಕ) ಮಹಮ್ಮದ್ ಸಲಾಹ್. ದಾನಿಶ್. ರೈಯು ಉಮರ್. ಇರ್ಶಾದ್ ಇನ್ಸೀರ್. ಫಾಯಿಮ್ ಮುನಾಝ್ ಸಜ್ಜಾದ್. ರಶಾದ್ ಅರಾಫತ್ .ರಾಝಿನ್ ಬಾಶಿಮ್. ಶಯಾನ್ ರಾಶಿಶ್ ಅನೀಝ್ ಆಶಿಕ್ ಅರಾಫತ್ ಮಾಝಿನ್ ತಂಡದಲ್ಲಿದ್ದರು.
ತರಬೇತು ದಾರರಾದ ತನ್ವೀರ್ ಜೆನಿಫಾ. ಅದ್ದು ಸಿಟಿಝನ್. ಪಿ ಟಿ ಮಾಸ್ಟರ್ ಗಣೇಶ್. ಮುಂತಾದವರಿದ್ದರು ವಿಜೇತ ತಂಡಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಟಿಜನ್ ಕ್ಲಬ್ ಕೆ ಸಿ ನಗರ ಶುಭಹಾರೈಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.