(www.vknews.in) : ಬದರ್ ಜುಮಾ ಮಸೀದಿ ಹಾಗೂ ಅಲ್ ಫಲಾಹ್ ಮದರಸ ಅರಂಬೂರು ಸುಳ್ಯ ಇದರ ವತಿಯಿಂದ ಭಾರತ ದೇಶದ 75 ನೇ ಸ್ವಾಂತಂತ್ರ್ಯ ದಿನಾಚರಣೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿತು , ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಬಾಪು ಸಾಹೇಬ್ ಅರಂಬೂರು ದ್ವಜರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಅಧ್ಯಕ್ಷರಾದ ಭಾಷಾ ಸಾಹೇಬ್ ವಹಿಸಿದರು . ಖತೀಬ್ ಉಸ್ತಾದ್ ಮೂಸಾ ಹಾರಿಸ್ ಮಖ್ದೂಮಿ ಪ್ರಾಸ್ತಾವಿಕ ಭಾಷಣ ಮಾಡುವ ಮೂಲಕ ದೇಶಕ್ಕಾಗಿ ಮಡಿದ ವೀರ ಸೇನಾನಿ ಗಳನ್ನು ಸ್ಮರಿಸಿದರು ,ಮಾಜಿ ನಗರ ಪಂಚಾಯತ್ ಅಧ್ಯಕ್ಷರಾಗಿದ್ದ ಶಂಸುದ್ದೀನ್ , ಮಾಜಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಯುಸೂಫ್ ಅಂಜಿಕ್ಕಾರ್ , ಆಡಳಿತ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ , ಮದರಸ ಅಧ್ಯಾಪಕರಾದ ಬಶೀರ್ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಕಲಂದರ್ , ಮದ್ರಸ ಉಸ್ತುವಾರಿ ಅಕ್ಬರ್ ಕರಾವಳಿ, ಕಾರ್ಯದರ್ಶಿ ಉಮ್ಮರ್ ಬುಷ್ರ ಹಾಗೂ ಕಮಿಟಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು. ಆಸೀಫ್ ಪನ್ನೆ ಸ್ವಾಗತಿಸಿ, ನೀಝಾರ್ ಪಾಲಡ್ಕ ವಂದಿಸಿದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.