ಕಬಕ (www.vknews.in) : ಸಿರಾಜುಲ್ ಹುದಾ ವಿದ್ಯಾರ್ಥಿ ಸಂಘ (ರಿ)ಸುಲ್ತಾನ್ ನಗರ ಕಬಕ ಹಾಗೂ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಪುತ್ತೂರು ಇದರ ಸಹಬಾಗಿತ್ವದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರವು ಸುಲ್ತಾನ್ ನಗರ ಕಲ್ಲಂಡಡ್ಕದಲ್ಲಿ ನಡೆಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿರಾಜುಲ್ ಹುದಾ ವಿದ್ಯಾರ್ಥಿ ಸಂಘ ಇದರ ಗೌರವ ಅಧ್ಯಕ್ಷರಾಗಿರುವಂತಹ ಆಸೀಫ್ ಝುಹ್ರಿ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು, ಕಾರ್ಯಕ್ರಮದಲ್ಲಿ ಹಮೀದ್ ಬಾಖವಿ ಖತೀಬರು ಮಹದನುಲ್ ಉಲೂಮ್ ಮದ್ರಸ ಕಬಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜನಾಬ್ ಸಿದ್ಧಿಕ್ ಹಾಜಿ ಪ್ರಾಸ್ತವಿಕ ಭಾಷಣ ಮಾಡಿದರು, ಮುಖ್ಯ ಅತಿಥಿಗಳಾಗಿದ್ದಂತಹ ಡಾ| ರಾಮಚಂದ್ರ ಭಟ್ MBBS ಅವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು ಒಟ್ಟು 44 ಯುನಿಟ್ ರಕ್ತವು ಸಂಗ್ರಹವಾಯಿತು.
ಕೇಂದ್ರ ಜುಮಾ ಮಸೀದಿ ಖತೀಬರಾದ ಹಮೀದ್ ಬಾಖವಿ ಅವರು ಮಾತನಾಡಿ ಸ್ವಾತಂತ್ರ್ಯ ಕ್ಕೆ ಬೇಕಾಗಿ ಹೋರಾಡಿ ತಮ್ಮ ರಕ್ತ ವನ್ನು ದೇಶಕ್ಕಾಗಿ ಮುಡಿಪಾಗಿಸಿದ ಅದೆಂತ ನಾಯಕರು ಇದ್ದರು ಅವರು ದೇಶಕ್ಕಾಗಿ ರಕ್ತ ವನ್ನು ಕೊಟ್ಟಿದ್ದಾರೆ ಇಂದಹ ಕ್ಯಾಂಪ್ ಮುಖಾಂತರ ನಮ್ಮ ರಕ್ತ ವು ಬೇರವರಿಗೆ ಆಸರೆ ಆಗಲಿಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.