(www.vknews.in) : ಸ್ವಾತಂತ್ರ್ಯ ಅಮ್ರತ ಮಹೋತ್ಸವವನ್ನು ಮದ್ದಡ್ಕ ನೂರುಲ್ ಹುದಾ ಜುಮಾ ಮಸ್ಜಿದ್ ಮುಂಭಾಗ ವಿಜ್ರಂಭಣೆಯಿಂದ ಆಚರಿಸಲಾಯಿತು. ನೂರುಲ್ ಹುದಾ ಜುಮಾ ಮಸ್ಜಿದ್ ಮದ್ದಡ್ಕ ಅಧ್ಯಕ್ಷರಾದ ಯುನೂಸ್ ಅಮೀನ್ ಧ್ವಜಾರೋಹಣವನ್ನು ನೆರವೇರಿಸಿದರು, ಮುಹಮ್ಮದ್ ಶರೀಫ್ ಲತೀಫಿ ಸದರ್ ಉಸ್ತಾದ್ ನೂರುಲ್ ಹುದಾ ಮದರಸ ಮದ್ದಡ್ಕ ದುಃಅ ನೆರವೇರಿಸಿದರು.
ಸಿನಾನ್ ಸಖಾಫಿ ಮುಅಲ್ಲಿಂ ನೂರುಲ್ ಹುದಾ ಮದರಸ ಮದ್ದಡ್ಕ ರವರು ಭಾರತದ ಸ್ವಾತಂತ್ರ್ಯಕ್ಕಾಗಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡುವುದು ಪ್ರತೀ ಬಾರತೀಯ ಪ್ರಜೆಯ ಕರ್ತವ್ಯ, ವಿರುದ್ಧವಾಗಿ ನಡೆದಯಕೊಳ್ಳುವ ಫ್ಯಾಸಿಸ್ಟ್ ಶಕ್ತಿಗಳನ್ನು ಮೆಟ್ಟಿ ನಿಂತು ನಮ್ಮೊಳಗಿನ ಐಕ್ಯತೆಯನ್ನು ಕಾಪಾಡಬೇಕು’ಮುಖ್ಯ ಬಾಷಣದಲ್ಲಿ ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೂರುಲ್ ಹುದಾ ಜುಮಾ ಮಸ್ಜಿದ್ ಮದ್ದಡ್ಕ ಇದರ ಪ್ರಧಾನ ಕಾರ್ಯದರ್ಶಿ ಅಶ್ರಫ್ ಚಿಲಿಂಬಿ ರವರು ಬಹುಮಾನ ವಿತರಣಾ ನಡೆಸಿದರು, ಸದರ್ ಉಸ್ತಾದ್ ಪ್ರತಿಜ್ಞೆ ವಚನ ಹೇಳಿಕೊಟ್ಟರು, ಈ ಸಂದರ್ಭಭದಲ್ಲಿ ಆಡಳಿತ ಸಮಿತಿ ಯ ಪದಾಧಿಕಾರಿಗಳು ಊರಿನ ಗಣ್ಯ ವ್ಯಕ್ತಿಗಳು ಹಿರಿಯರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಎಸ್, ಬಿ, ಎಸ್ ಅದ್ಯಕ್ಷರಾದ ಮುಹಮ್ಮದ್ ರೈಹಾನ್ ಸ್ವಾಗತಿಸಿ, ಎಸ್, ಬಿ, ಎಸ್ ಕಾರ್ಯದರ್ಶಿ ಮುರ್ಶಿದ್ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.