ಮಡಿಕೇರಿ (www.vknews.in) : ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಲ್ಲಾ ವರ್ಷದ ರೀತಿಯಲ್ಲಿ ಈ ವರ್ಷವೂ ಸಹ 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕೊಡಗಿನ ಎಲ್ಲಾ ಜನಾಂಗದ ಬಡ ವಿದ್ಯಾರ್ಥಿಗಳಿಂದ ಕೋಸ ಸ್ಕಾಲರ್ಷಿಪ್ (ವಿದ್ಯಾರ್ಥಿ ವೇತನ) ಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ, ಸಂಘಟನೆಯವರಿಗೆ ತಲುಪಿದ ವಿದ್ಯಾರ್ಥಿಗಳ ಆರ್ಥಿಕ ಹಿನ್ನಲೆ ಪರಿಶೀಲಿಸಿ ಬಂದಿರುವ ಅರ್ಜಿಗಳಲ್ಲಿ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತೆ ಎಂದು ಸಂಘದ ಮುಖ್ಯ ಕಾರ್ಯದರ್ಶಿಯಾದ ರಫೀಕಲಿ ಕುಂಡಂಡ ಅವರು ತಿಳಿಸಿದ್ದಾರೆ.
31.08.2022 ದಿನಾಂಕದ ಒಳಗಾಗಿ ಈ ಕೆಳಗಿನ ದಾಖಲೆಗಳನ್ನು +971567012123 ವಾಟ್ಸಾಪ್ ಅಥವಾ [email protected] ಇಮೇಲ್ ಕಳಿಸಬೇಕು.
Required Documents: 1. Marks Card with School/College Stamp 2. Ration Card Copy 3. Contact Number with Address 4. Recent Photo 5. Income Certificate (Not mandatory) 6, 2022-23 PUC or Other Academic Course’s Admission Receipt
ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾಗಿ ಅಬ್ದುಲ್ಲಾ ಕೊಂಡಂಗೇರಿ, ಹುಸೈನ್ ಫೈಜಿ ಸೋಮವಾರಪೇಟೆ, ಶಾಫಿ ಅಜಾದ್ ನಗರ ಕೊಟ್ಟಮುಡಿ, ರಫೀಕಲಿ ಕುಂಜಿಲ, ಸಾದಿಕ್ ಕೊಳಕೇರಿ, ಸೌರಭ್ ಕಾವೇರಪ್ಪ ಕುಟ್ಟ, ಮುಜೀಬ್ ಕೊಂಡಂಗೇರಿ, ಅಶ್ರಫ್ ಮಡಿಕೇರಿ, ಹಮೀದ್ ವಿರಾಜಪೇಟೆ, ಇರ್ಫಾನ್ ಮೂರ್ನಾಡು, ಗೌತಮ್ ವಿರಾಜಪೇಟೆ, ರೋಷನ್ ಮದೆನಾಡು, ಸಲೀಂ ಮೂರ್ನಾಡು, ಅಸ್ಲಮ್ ಪಡಿಯಾಣಿ, ನೌಶೀರ್ ಎಡಪಲ, ಝಿಯಾ ಚೋಕಂಡಳ್ಳಿ, ಮನ್ಸೂರ್ ಕುಶಾಲನಗರ ಮತ್ತು ಸತ್ತಾರ್ ಶನಿವಾರಸಂತೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.