ಕನ್ಯಾನ(ವಿಶ್ವಕನ್ನಡಿಗ ನ್ಯೂಸ್): ಕನ್ಯಾನ ಸುನ್ನೀ ಸಂಘ ಕುಟುಂಬವಾದ SYS ,SSF ,KCF, KMJ,SJM,SMA, SBS ಸಹಯೋಗದಲ್ಲಿ ದಿನಾಂಕ 30-9-2022 ಶುಕ್ರವಾರ ಅಸರ್ ನಂತರ ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ(ಖ.ಸಿ) ರವರ ಮಖಾಂ ಝಿಯಾರತಿನೊಂದಿಗೆ ಚಾಲನೆಗೊಂಡ ಕಾಲ್ನಡಿಗೆ ಜಾಥಾ ಕನ್ಯಾನ ಜಂಕ್ಷನ್ ನಲ್ಲಿ ಸಪಾಪ್ತಿಗೊಂಡವು. ಮಖಾಂ ಝಿಯಾರತಿಗೆ SYS ದ ಕ ಈಷ್ಟ್ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಸಖಾಫಿ ಪಾಡಿ ನೇತೃತ್ವ ನೀಡಿದರು.
ರ್ಯಾಲಿಯುದ್ದಕ್ಕೂ ಮಕ್ಕಳ ಪಥ ಸಂಚಲನ ,ದಫ್ ಆಕರ್ಶನೀಯವಾಗಿತ್ತು. ನಂತರ ನಡೆದ ಕಾರ್ಯಕ್ರಮದ ಪ್ರಾರ್ಥನೆ ಅಬೂಬಕ್ಕರ್(ಸುನ್ನೀ) ಫೈಝಿ ಉಸ್ತಾದ್ ನೆರೆವೇರಿಸಿದರು. SYS ಕನ್ಯಾನ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಖಾಫಿ ಅಂಗ್ರಿ ಅಧ್ಯಕ್ಷತೆ ವಹಿಸಿದರು.
ಕೆ ಎಂ ಅಶ್ರಫ್ ಸಖಾಫಿ ಕನ್ಯಾನ ಸ್ವಾಗತ ಮಾಡಿ, ಕೆ ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ಹುಸೈನ್ ಮುಈನಿ ಮಾರ್ನಾಡ್ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕನ್ಯಾನ ತಾಜುಲ್ ಉಲಮಾ ಸುನ್ನೀ ಸೆಂಟರ್ ಅಧ್ಯಕ್ಷ ಮುಹಮ್ಮದ್ ಹಾಜಿ ಬನಿಯಾಸ್ ,SSF ಸೆಕ್ಟರ್ ಅಧ್ಯಕ್ಷ ಶಬೀರ್ ಅಂಗ್ರಿ, ಸ್ವಾಗತ ಸಮಿತಿ ಚೆಯರ್ಮಾನ್ ಅಬ್ದುಲ್ ಖಾದರ್ ಸ ಅದಿ , SMA ಕನ್ಯಾನ ರೀಜಿನಲ್ ಅಧ್ಯಕ್ಷ ಇಸ್ಮಾಯಿಲ್ ಪೊಯ್ಯಕಂಡ, KCF ,SJM ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ಸುನ್ನೀ ಸಂಘ ಕುಟುಂಬದ ನೂರಾರು ಸದಸ್ಯರು ಮೆರುಗು ನೀಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.