ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಏರ್ ಇಂಡಿಯಾ ಎಕ್ಸ್ಪ್ರೆಸ್ ದುಬೈನಿಂದ ದೇಶದ ಹಲವು ಸ್ಥಳಗಳಿಗೆ ಕಡಿಮೆ ದರಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಮಂಗಳೂರು ಕೂಡ ಸೇರಿದೆ. ಮಂಗಳೂರು ಅಲ್ಲದೇ, ತಿರುವನಂತಪುರಮ್, ಕೊಚ್ಚಿ, ಕೋಝಿಕ್ಕೋಡ್, ಮುಂಬೈ, ದೆಹಲಿ, ಅಮೃತಸರ, ಜೈಪುರ, ಲಕ್ನೋ, ಮತ್ತು ತಿರುಚ್ಚಿಯಂತಹ ನಗರಗಳಿಗೂ ಕಡಿಮೆ ದರದಲ್ಲಿ ಪ್ರಯಾಣಿಸಬಹುದು.
ದುಬೈನಿಂದ ಮಂಗಳೂರಿಗೆ 298 ದಿರ್ಹಮ್, ಕೊಚ್ಚಿಗೆ 380 ದಿರ್ಹಮ್, ಕೋಝಿಕ್ಕೋಡ್ 269 ದಿರ್ಹಮ್, ತಿರುವನಂತಪುರ 445 ದಿರ್ಹಮ್, ಮುಂಬೈಗೆ 279 ದಿರ್ಹಮ್, ದೆಹಲಿ 298 ದಿರ್ಹಮ್, ಅಮೃತಸರ 445 ದಿರ್ಹಮ್, ಜೈಪುರ 313 ದಿರ್ಹಮ್, ಲಕ್ನೋ 449 ದಿರ್ಹಮ್ ಮತ್ತು ತಿರುಚ್ಚಿ 570 ದಿರ್ಹಮ್ ಟಿಕೆಟ್ ದರವಾಗಿದೆ. ಮಂಗಳೂರಿಗೆ ಈ ರಿಯಾಯಿತಿ ದರವು ಈ ತಿಂಗಳ 23 ರಿಂದ ತಿಂಗಳ ಕೊನೆಯವರೆಗೆ ಇರಲಿದೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.