(www.vknews.in) ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಯಿತು ಅಧ್ಯಕ್ಷತೆ ಯನ್ನು ಜಮಾತ್ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ ವಹಿಸಿದರು ಕಾರ್ಯಕ್ರಮ ವನ್ನು ಖತೀಬ್ ಅಲ್ಹಾಜ್ ಇಸಾಕ್ ಬಾಖವಿ ನರೆವೇರಿಸಿ ನಮ್ಮನ್ನು ಅಗಲಿದ ಸಮಸ್ತ ನೇತಾರರ ಗುಣಗಾನ ಮಾಡಿದರು ಮುಖ್ಯ ಅಥಿತಿಗಳಾಗಿ ಆಗಮಿಸಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಸಮಸ್ತದ ಅದಿನ ದಲ್ಲಿರುವ ಮದರಸಗಳು ಒಳ್ಳೆಯ ಧಾರ್ಮಿಕ ವಿದ್ಯಾಭ್ಯಾಸ ವನ್ನು ನೀಡುತ್ತಿರುದು ಶ್ಲಾಘನೀಯ ಇದರ ಹಿಂದೆ ಹಲವಾರು ಮಹನೀಯರ ತ್ಯಾಗ ಇದೆ ಅವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ ಎಂದರು ವೇದಿಕೆ ಯಲ್ಲಿ ಸಹಾಯಕ ಅಧ್ಯಾಪಕ ಹಾಜಿ ಸಾಜೀದ್ ಅಝಹರಿ, ಮದರಸ ಮ್ಯಾನೇಜ್ ಮೆಂಟ್ ಸಂಚಾಲಕ ಅಮಿರ್ ಕುಕ್ಕುಂಬಳ, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಮುಝಮ್ಮಿಲ್, ಮುಸ್ತಫಾ ಎ ಇ, ಜುಬೈರ್, ಮೊಯಿದುಕುಟ್ಟಿ ಮೊಹಮ್ಮದ್, ಹಮೀದ್ ಸಮದ್ ಕೋಡಂಕೇರಿ ಮೊದಲಾದವರು ಉಪಸ್ಥಿತರಿದ್ದರು ಸದರ್ ಸಹದ್ ಪೈಝಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.