(www.vknews.in) ಪುತ್ತೂರು : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು. ಕಾಲೇಜ್ ನಲ್ಲಿ ಈದ್ ಮೀಲಾದ್ ವಾರ್ಷಿಕ ಫೆಸ್ಟ್ “ಗ್ಲೋ-2k22” ಕಾರ್ಯಕ್ರಮವು ಕಾಲೇಜ್ ಸಭಾಂಗಣದಲ್ಲಿ ಜರಗಿತು.
ಉದ್ಗಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು, ಅಸ್ವಾಲಿಹಾ ಮಹಿಳಾ ಕಾಲೇಜ್ ನಲ್ಲಿ ಶರೀಅತ್ ಮತ್ತು ಪಿ.ಯು.ಶಿಕ್ಷಣದ ಜೊತೆಗೆ ವಿವಿಧ ಪಠ್ಯೇತರ ವಿಷಯಗಳನ್ನು ನೀಡಲಾಗುತ್ತಿದ್ದು ,ವಿದ್ಯಾರ್ಥಿನಿಯರು ಕಲಿಕೆಯ ಜೊತೆಗೆ ಸಾಹಿತ್ಯ ಕಲಾ ಕ್ಷೇತ್ರಗಳಲ್ಲೂ ಸಾಕಷ್ಟು ಕೌಶಲ್ಯ ಪಡೆಯಲು ಇದರಿಂದ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ಅವರು, ವಿದ್ಯಾರ್ಥಿನಿಯರು ಕೂಡ ಸಾಕಷ್ಟು ಧಾರ್ಮಿಕ ಬಗೆಗಿನ ಜ್ಞಾನವನ್ನು ಕಲಿತುಕೊಂಡು ಮುಂದೆ ಅದನ್ನು ಜೀವನದಲ್ಲಿ ಪಾಲಿಸಿಕೊಂಡು ಇತರರಿಗೆ ಕಲಿಸಿ ಕೊಡುವಂತಾಗಬೇಕು, ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲೇ ಕಲಿಕೆಯ ಜೊತೆಗೆ ಪ್ರತಿಭಾ ಕೌಸಲ್ಯಗಳನ್ನು ಪಡೆದು ಕೊಳ್ಳಬೇಕೆಂದು ಹೇಳಿದರು. ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮುಸ್ತಫಾ ಅವರು ಮಾತನಾಡಿ ಧಾರ್ಮಿಕ ಲೌಕಿಕ ಶಿಕ್ಷಣವನ್ನು ವಿದ್ಯಾರ್ಥಿಗಳು ಸಮನ್ವಯ ವಾಗಿ ಪಡೆದಾಗ ಬದುಕಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು. ಸಮಾರಂಭದಲ್ಲಿ ಕೋಡಿಂಬಾಡಿ ಜುಮ್ಮಾ ಮಸೀದಿಯಯ ಅಧ್ಯಕ್ಷ ಉದ್ಯಮಿ ಉಮರ್ ಹಾಜಿ ಕೋಡಿಂಬಾಡಿ, ಕೆಮ್ಮಾಯಿ ಜುಮ್ಮಾ ಮಸೀದಿಯ ಅಧ್ಯಕ್ಷ ಬಶೀರ್ ಹಾಜಿ ದಾರಂದಕುಕ್ಕು, ಮೌಂಟನ್ ವ್ಯೂ ದಾರುಲ್ ಫಲಾಹ್ ಮದ್ರಸ ಅಧ್ಯಾಪಕ ನಝೀರ್ ಅರ್ಶದಿ ಮೊದಲಾದವರು ಉಪಸ್ಥಿತರಿದ್ದರು. ಶರೀಅತ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ , ಶರೀಅತ್ ಶಿಕ್ಷಣದ ಅಗತ್ಯತೆ ಬಗ್ಗೆ ವಿವರಿಸಿದರು. ಸಾಲ್ಮರ ಪ್ರೌಢಶಾಲಾ ಶಿಕ್ಷಕ ಅಬ್ದುಲ್ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ಕೃತಜ್ಞತೆ ಸಲ್ಲಿಸಿದರು.ದೈಹಿಕ ಶಿಕ್ಷಕ ಅಶ್ರಫ್ , ಕಾರ್ಯಾಲಯ ನಿರ್ವಾಕರಾದ ಯೂಸುಫ್ ಮತ್ತು ಹಮೀದ್ ಸಹಕರಿಸಿದರು. ಉದ್ಗಾಟನಾ ಸಮಾರಂಭದ ಬಳಿಕ ಕಾಲೇಜ್ ನ ಒಳಾಂಗಣದಲ್ಲಿ ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸ್ಪರ್ಧೆ “ಗ್ಲೋ-2k22” ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಸಮಗ್ರ ಚಾಂಪಿಯನ್ ,ವಯಕ್ತಿಕ ಚಾಂಪಿಯನ್ ,ಟ್ಯಾಲೆಂಟ್ -2k22 ,ಟಾಪ್ ಸ್ಕೊರರ್ ಮೊದಲಾದ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.