ಕುವೈತ್ ಸಿಟಿ (ವಿಶ್ವ ಕನ್ನಡಿಗ ನ್ಯೂಸ್) : ಕೆಲಸದ ಪರವಾನಿಗೆ ಪಡೆಯಲು, ಕೆಲಸದ ಕೌಶಲ್ಯ ಮತ್ತು ಜ್ಞಾನವನ್ನು ಪರೀಕ್ಷಿಸುವ ಪರೀಕ್ಷೆಯು ಈಗ ಕಡ್ಡಾಯವಾಗಿದೆ ಎಂದು ಕುವೈತ್ ಹೇಳಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಸಾರ್ವಜನಿಕ ಪ್ರಾಧಿಕಾರ ತಿಳಿಸಿದೆ. ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಒಳಗೊಂಡ ಎರಡು ಹಂತಗಳು ಇರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಲಿಖಿತ ಪರೀಕ್ಷೆಯನ್ನು ಆಯಾ ದೇಶಗಳಲ್ಲಿನ ಕುವೈತ್ ರಾಯಭಾರ ಕಚೇರಿಯ ಮೂಲಕ ನಡೆಸಲಾಗುತ್ತದೆ. ಕುವೈತ್ಗೆ ಬಂದ ನಂತರ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು. ಇದಕ್ಕಾಗಿ ವಿಶೇಷ ಸ್ಮಾರ್ಟ್ ವ್ಯವಸ್ಥೆ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ, ಕಾನೂನನ್ನು 20 ಔದ್ಯೋಗಿಕ ವಿಭಾಗಗಳಲ್ಲಿ ಅಳವಡಿಸಲಾಗುವುದು. ನಂತರ ನಿರ್ಧಾರವನ್ನು ಇತರ ಹುದ್ದೆಗಳಿಗೂ ವಿಸ್ತರಿಸಲಾಗುವುದು.
ಇದೇ ವೇಳೆ ಕೌಶಲ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ದೇಶ ತೊರೆಯಲು ಸಾಕಷ್ಟು ಕಾಲಾವಕಾಶ ನೀಡಲಾಗುವುದು. ಕಾನೂನನ್ನು ಬಿಗಿಗೊಳಿಸಿದರೆ ಸಾಕಷ್ಟು ವಿದ್ಯಾರ್ಹತೆ ಇಲ್ಲದೆ ಕೆಲಸ ಮಾಡುವ ಭಾರತೀಯರು ಸೇರಿದಂತೆ ಹಲವು ವಿದೇಶಿಗರು ದೇಶ ತೊರೆಯಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.