ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ನ್ಯಾಯಮೂರ್ತಿ ಡಿ ವಿ ಚಂದ್ರಚೂಡ್ ಅವರನ್ನು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರತಿಷ್ಠಾಪಿಸಿದ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾಗಿದ್ದನ್ನು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರು ಟ್ವಿಟರ್ನಲ್ಲಿ ಪ್ರಧಾನಿಯವರು ಸಮಾರಂಭಕ್ಕೆ ಬಾರದಿರುವುದು ಸಂವಿಧಾನ ಮತ್ತು ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ಡಿ ವಿ ಚಂದ್ರಚೂಡ್ ಅವರು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಕಿರಣ್ ರಿಜಿಜು, ನಿವೃತ್ತ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನನ್ನ ಮಾಹಿತಿಯ ಪ್ರಕಾರ ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಗೈರುಹಾಜರಾಗಿರುವುದು ಬರಿಯ ದುರಹಂಕಾರ. ನಾನು ಇದನ್ನು ಭಾರತೀಯ ಸಂವಿಧಾನ ಮತ್ತು ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ನೋಡುತ್ತೇನೆ. ಮೋದಿಯವರ ಕ್ರಮ ಖಂಡನೀಯ. ವಿವರಣೆ ಅಥವಾ ಕ್ಷಮೆಯಾಚಿಸಬೇಕು’ ಎಂದು ಸುಬ್ರಮಣಿಯನ್ ಸ್ವಾಮಿ ಟ್ವಿಟರ್ನಲ್ಲಿ ಬರೆದಿದ್ದಾರೆ.
On the information I have, I conclude Modi’s absence from CJI Oath Taking Ceremony in the Rashtrapati Bhavan today obviously on hubris, is an affront to the Indian Constitution and Bharatiya Sanskar. Unless Modi comes up with an explanation or an apology his act be deplored. — Subramanian Swamy (@Swamy39) November 9, 2022
On the information I have, I conclude Modi’s absence from CJI Oath Taking Ceremony in the Rashtrapati Bhavan today obviously on hubris, is an affront to the Indian Constitution and Bharatiya Sanskar. Unless Modi comes up with an explanation or an apology his act be deplored.
— Subramanian Swamy (@Swamy39) November 9, 2022
ಇದೇ ವೇಳೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಚಂದ್ರಚೂಡ್ ಅವರನ್ನು ಅಭಿನಂದಿಸಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Congratulations to Dr. Justice DY Chandrachud on being sworn in as India’s Chief Justice. Wishing him a fruitful tenure ahead. — Narendra Modi (@narendramodi) November 9, 2022
Congratulations to Dr. Justice DY Chandrachud on being sworn in as India’s Chief Justice. Wishing him a fruitful tenure ahead.
— Narendra Modi (@narendramodi) November 9, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.