ಪ್ರಕೃತಿಲೋಕ(ವಿಶ್ವಕನ್ನಡಿಗ ನ್ಯೂಸ್): ‘ಕಾಡು’ ಈ ಸೃಷ್ಟಿ ಲೋಕದ ಒಂದು ಅಧ್ಭುತ ಹಾಗೂ ಅವಿಭಾಜ್ಯ ಅಂಗ. ಇಡೀ ಭೂ ಲೋಕವೇ ನಿಸರ್ಗ ದೇವಿಯ ಪರಿಶುದ್ಧ ಗಾಳಿಂದ ಅಸ್ತಿತ್ವದಲ್ಲಿರುವುದು ಸರ್ವಕಾಲಿಕ ಸತ್ಯ. ಜೀವವೈವಿಧ್ಯತೆಯಲ್ಲಿ ಅರಣ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ವಿವಿಧ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕ್ರಿಮಿ, ಕೀಟಗಳ, ಹಾಗೂ ಪಕ್ಷಿಸಂಕುಲಗಳನ್ನ ಹೊಂದಿಕೊಂಡಿರುವ ಸಮಗ್ರ ಒಡಲೇ ಕಾಡು. ಕಾಡಿಂದ ನಾಡು ಎಂಬ ಮಾತು ಸತ್ಯ. ಕಾಡು ನೋಡಲು ಕೊಂಚ ಭಯವೆನಿಸಿದರು ಈ ಸೃಷ್ಟಿಯ ಲೋಕದಲ್ಲಿ ಅದೊಂದು ಸುಂದರ ತಾಣ, ಇಡೀ ಪ್ರಪಂಚದಲ್ಲಿ 75% ನೀರು ಬಾಕಿ 25% ಭೂಮಿಯಿದ್ದರೂ ಭಾಗಶಃ ಭೂಭಾಗದಲ್ಲಿ ಅರಣ್ಯವೇ ಆವರಿಸಿದೆ, ಅರಣ್ಯ ಆವರಿಸಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಕಾಡೇ ಇಂದು ನಾಡಗಿದೆ ಎಂದು ಹೇಳಬಹುದು.
ಅರಣ್ಯವನ್ನು ನೋಡಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇತ್ತೀಚಿಗಂತೂ ಕಾನನ ಚಾರಣ ಪ್ರಿಯರೇ ಹೆಚ್ಚಾಗಿದ್ದು, ಅರಣ್ಯದ ಹಸಿರು, ಪಕ್ಷಿಗಳ ಕಲರವ ನೋಡಿ, ಹರಿವ ತೊರೆಗಳ ನೋಡಿ ಮನ ಸಂತೋಷಪಡುವುದು ಜನರ ಹವ್ಯಾಸವಾಗಿದೆ. ಊರಲ್ಲಿ ಸಿಗದಿರುವ ನೆಮ್ಮದಿ, ಸಂತೋಷ ಒಂಥರಾ ಮುದವಾದ ವಾತಾವರಣ ಸಿಗುವುದು ಕಾಡಲ್ಲಿ ಮಾತ್ರ ಅಲ್ಲಿನ ಪರಿಶುದ್ಧ ಗಾಳಿ ಒಂದಷ್ಟು ಆರೋಗ್ಯ ಸುಧಾರಣೆಯೂ ಆಗಬಹುದು.
ಹಗಲಿಗಿಂತ ಇರುಳಲ್ಲಿ ಕಾನನವನ್ನು ವೀಕ್ಷಿಸಬೇಕು ಆ ಅಧ್ಭುತ ಅನುಭವವೇ ಬೇರೆ, ಇಡೀ ನಾಡೆ ಸ್ಥಬ್ದವಾಗಿ ಮಲಗಿರುವ ವೇಳೆಯಲ್ಲಿ ಅರಣ್ಯದ ಶಬ್ದಗಳಿಗೆ ಒಮ್ಮೆ ಕಿವಿಗೊಟ್ಟು ನೋಡಿ ಆ ಪರಮಾಧ್ಭುತ ಕ್ಷಣವೇ ಚಂದ. ಬೆಳದಿಂಗಳಿನ ಪ್ರಭೆಯಲ್ಲಿ ಆ ತೇಗ, ಹೊನ್ನೇ,ಗೇರು ಮರಗಳ ತೇಜಸ್ಸು ಕಂಗೊಳಿಸುತ್ತದೆ, ಜಿಂಕೆ, ನವಿಲುಗಳು ಕೂಗುವ ಸದ್ದು, ಪಕ್ಷಿ, ಗುಬ್ಬಿ, ಕೀಟಗಳ ಅಶರೀರವಾಣಿ, ಬೆಟ್ಟ, ಗುದ, ಗುಡ್ಡಗಳ ಮೇಲೆ ಬಿದ್ದ ಬೆಳದಿಂಗಳಿನ ಛಾಯೆ, ಎತ್ತರದ ಪ್ರದೇಶದಲ್ಲಿ ನಿಂತು ಊರನ್ನ ನೋಡಿದರೆ ಆ ಸಾಲಾಂಕೃತ ದೀಪಗಳು ನಿಜಕ್ಕೂ ಕಾಡು ಹಗಲಿಗಿಂತ ಇರುಳಲ್ಲಿ ನೋಡಿದರೆ ನಿಸರ್ಗ ದೇವಿಯ ಅತ್ಯದ್ಭುತ ಸ್ಪರ್ಶ ನಮಗಾಗುತ್ತದೆ.
✍️ಕೆ.ಶ್ರೀಧರ್ (ಕೆ.ಸಿರಿ) ಯುವಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.