15 ದಿನಗಳೊಳಗೆ ಪಾವತಿಸದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ; ಸಂಕಷ್ಟದಲ್ಲಿ ಲಕ್ಷಾಂತರ ಅನಿವಾಸಿಗಳು
ಜೆದ್ದಾ(www.vknews.in): ಕೊವಿಡ್ ಸಾಂಕ್ರಾಮಿಕದ ಸಮಯದ ಕರ್ಫ್ಯೂ ಉಲ್ಲಂಘಿಸಿ ಅಂಗಡಿ ಮುಂಗಟ್ಟುಗಳಲ್ಲಿ ಪ್ರವೇಶಿಸಿದ ಸೌದಿ ಪ್ರಜೆಗಳು ಹಾಗೂ ವಲಸಿಗರಿಗೆ ಸೌದಿ ಪೊಲೀಸರು ವಿಧಿಸದ್ದ ದಂಡ ಪಾವತಿಸಲು 15 ದಿನಗಳ ಅಂತಿಮ ಗಡುವನ್ನು ನೀಡಲಾಗಿದೆ. 15 ದಿನಗಳೆೊಳಗಾಗಿ ದಂಡ ಪಾವತಿಸಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. ಕೊವಿಡ್ ಸಮಯದಲ್ಲಿ ವಿಧಿಸಿದ್ದ ಕರ್ಫ್ಯೂ ಉಲ್ಲಂಘನೆಯ ಅರಿವಿಲ್ಲದೆ ಅನುಮತಿ ವಿನಃ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ಇನ್ನಿತರ ಸೂಪರ್ ಮಾರ್ಕೆಟ್ ಗಳಿಗೆ ಪ್ರವೇಶಿಸಿದ ಸಾವಿರಾರು ಅನಿವಾಸಿ ಭಾರತೀಯರಿಗೆ 10,000 ರಿಯಾಲ್ ದಂಡವನ್ನು ಪೊಲೀಸರು ವಿಧಿಸಿದ್ದು, ಇದುವರೆಗೂ ದಂಡ ಪಾವತಿಸದಿದ್ದ ಅನಿವಾಸಿಗಳು ನಿರಾಲರಾಗಿದ್ದರು . ಇದೀಗ ಮೊಬೈಲ್ ಮೂಲಕ ದಂಡ ಪಾವತಿಸಲು ಅಂತಿಮ ಎಚ್ಚರಿಕೆ ನೀಡಲಾಗಿದ್ದು, ಅನಿವಾಸಿಗಳು ಚಿಂತಾಕ್ರಾಂತರಾಗಿದ್ದಾರೆ. 15 ದಿನಗಳಲ್ಲಿ ದಂಡ ಪಾವತಿಸದಿದ್ದಲ್ಲಿ ಶಿಸ್ತು ಕ್ರಮದ ಜೊತೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.