(www.vknews.in) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿಸುವ ಕೋಮು ಪ್ರಚೋದನಾಕಾರಿ ಕೃತ್ಯಗಳಿಗೆ ಖುದ್ದು ರಾಜ್ಯ ಬಿ.ಜೆ.ಪಿ.ಸರ್ಕಾರವೇ ಪ್ರೋತ್ಸಾಹ ನೀಡುತ್ತಿದ್ದು, ಧರ್ಮದ ಆಧಾರದಲ್ಲಿ ಮತಗಳನ್ನು ಒಡೆದು ಮತ್ತೆ ಅಧಿಕಾರಕ್ಕೇರುವ ತಿರುಕನ ಕನಸನ್ನು ಬಿ.ಜೆ.ಪಿ.ಕಾಣುತ್ತಿದೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಹೇಳಿದ್ದಾರೆ.
ಸರ್ಕಾರವು ಅಭಿವೃದ್ಧಿಯ ಪರವಿರಬೇಕೇ ಹೊರತು ಸಮಾಜ ವಿಭಜನಾಕಾರಿ ಶಕ್ತಿಗಳ ಪರವಲ್ಲ. ಜನರು ಶಾಂತಿ, ಸೌಹಾರ್ದತೆಯಿಂದ ಬದುಕುವುದು ಬಿ.ಜೆ.ಪಿ.ಗೆ ಇಷ್ಟವಿಲ್ಲ, ಕೋಮು ಪ್ರಚೋದನಾಕಾರಿ ಹೇಳಿಕೆ ನೀಡುವವರನ್ನು, ಬ್ಯಾನರ್ ಗಳನ್ನು ಅಳವಡಿಸುವವರನ್ನು, ಧರ್ಮದ ಆಧಾರದಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹಾಕುವವರನ್ನು, ವಸ್ತ್ರದ ಹಾಗೂ ಆಹಾರದ ವಿಚಾರದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವವರನ್ನು ಹಿಮ್ಮೆಟ್ಟುಸುವಲ್ಲಿ ಸರ್ಕಾರವು ವಿಫಲವಾಗಿದ್ದು, ಉದ್ದೇಶಪೂರ್ವಕವಾಗಿ ಬಿ.ಜೆ.ಪಿ.ಯು ಸಾಮರಸ್ಯ ವಿರೋಧಿಗಳಿಗೆ ಬೆಂಗಾವಲಾಗಿ ನಿಂತಿದೆ ಆ ಮೂಲಕ ತನ್ನ ಮತ ಬ್ಯಾಂಕ್ ನ್ನು ಗಟ್ಟಿ ಮಾಡುವ ಕಾರ್ಯದಲ್ಲಿ ಮಗ್ನವಾಗಿದೆ ಎಂದು ಶೌವಾದ್ ಗೂನಡ್ಕರವರು ಆರೋಪಿಸಿದ್ದಾರೆ.
ಕೋಮು ಪ್ರಚೋದನಾಕಾರಿ ಕೃತ್ಯಕ್ಕೆ ಮುಂದಾಗುವ ಯಾರೇ ಆಗಲಿ ಸರ್ಕಾರವು ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು, ಆದರೆ ಬಿ.ಜೆ.ಪಿ.ಸರ್ಕಾರಕ್ಕೆ ಅದನ್ನು ಮಾಡುವ ತಾಕತ್ತಿಲ್ಲ, ಅವರದ್ದು ಕಮಿಷನ್ ಸರ್ಕಾರವೇ ಹೊರತು ಡಬಲ್ ಎಂಜಿನ್ ಸರ್ಕಾರವಲ್ಲವೆಂದವರು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.