(www.vknews.in) ಮಂಗಳೂರು: ಸಮಾಜ ಸೇವಕ ಹಾಗೂ ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಸುಶೀಲ್ ನೊರೊನ್ಹಾ ಅವರು ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಸುಶೀಲ್ ನೊರೊನ್ಹಾ ಇತ್ತೀಚಿಗಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದರು. ಇವರ ಹಠಾತ್ ಮರಣಕ್ಕೆ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಜಾಕೇ ಮಾಧವ ಗೌಡ, ರಾಜ್ಯ ವಕ್ತಾರ ಎಂ. ಬಿ. ಸಧಾಶಿವ, ಕಾರ್ಯಧಕ್ಷರಾದ ಇಕ್ಬಾಲ್ ಅಹ್ಮದ್ ಮುಲ್ಕಿ, ನಝೀರ್ ಉಳ್ಳಾಲ್, ವಸಂತ ಪೂಜಾರಿ, ಮುಖಂಡರಾದ ಡಾ. ಅಮರಶ್ರೀ ಅಮರನಾಥ ಶೆಟ್ಟಿ, ರಿಯಾಝ್ ಕಾರ್ನಾಡ್, ಹೈದರ್ ಪರ್ತಿಪಾಡಿ, ಪ್ರವೀಣ್ ಚಂದ್ರ ಜೈನ್, ಅಝೀಜ್ ಕುದ್ರೋಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೇ ರಮೀಝ ನಾಸಿರ್, ರಾಜಶ್ರೀ ಹೆಗ್ಡೆ, ಸುಮತಿ ಹೆಗ್ಡೆ, ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ರತ್ನಾಕರ್ ಸುವರ್ಣ, ಫೈಝಲ್ ಮಂಗಳೂರು, ರಾಮ್ ಗಣೇಶ್, ನೂರುಲ್ಲ ಶೇಕ್, ಶಶಿಕಾಂತ್ ಶೆಟ್ಟಿ, ನಿಸಾರ್ ಅಹ್ಮದ್, ಜಮೀರ್ ಶಾ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ
ಮೃತರು ಪತ್ನಿ ಎಡ್ನಾ ನೊರೊನ್ಹಾ, ಪುತ್ರ ಅಗ್ನೆಲೊ ನೊರೋನ್ಹಾ ರವರನ್ನು ಅಗಲಿದ್ದಾರೆ. ಇವರ ಕುಟುಂಬಕ್ಕೆ ಭಗವಂತನು ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.