ಸುಳ್ಯ (www.vknews.in) : ಜಾತ್ಯತೀತ ಜನತಾದಳ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೋಹ್ನ ಅವರ ನಿಧನಕ್ಕೆ ಸುಳ್ಯ ತಾಲೂಕು ಜಾತ್ಯಾತೀತ ಜನತಾದಳ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಎ.ಬಿ.ಮೊಹಿದೀನ್ ಕಳಂಜ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ಬೆನ್ನೆಲುಬಿನಂತೆ ಪಕ್ಷ ನಿಷ್ಠೆಯಿಂದ ಕಾರ್ಯಾಚರಿಸಿದ ಸಮಾಜಸೇವಕ ಮತ್ತು ಉದ್ಯಮಿಯಾಗಿದ್ದ ಸುಶೀಲ್ ನೊರೋಹ್ನ ಸರ್ವ ಜನ ಬಾಂಧವರು ಗೌರವಿಸುವ ವ್ಯಕ್ತಿಯಾಗಿದ್ದರು. ನಿಷ್ಠಾವಂತ ರಾಜಕಾರಣಿಯಾಗಿ ನಾಡಿನ ಏಕತೆಗಾಗಿ ನಿರಂತರ ಶ್ರಮಿಸಿದ ಸುಶೀಲ್ ನೋರೋಹ್ನ ನಿಧನದೊಂದಿಗೆ ಪಕ್ಷ ಜನಪ್ರಿಯ ನಾಯಕನೊಬ್ಬನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತ ನು ಅವರ ಕುಟುಂಬ, ಹಿತೈಷಿಗಳು, ಸ್ನೇಹಿತರಿಗೆ ನೀಡಲಿ ಎಂದು ಅವರು ತನ್ನ ಸಂತಾಪದಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.