(www.vknews.in) ಆಮ್ ಆದ್ಮಿ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆ ಸಿದ್ಧತಾ ಸಭೆ ಹಾಗೂ ಇತರ ಪಕ್ಷದಿಂದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆಯಿತು.
ಉಡುಪಿ ದ.ಕ ಜಿಲ್ಲಾ ಆಮ್ ಆದ್ಮಿ ಪಕ್ಷದ ವೀಕ್ಷಕ ವಿವೇಕ್ ಸಾಲಿನ್ಸ್ ಮಾತನಾಡಿ ಆಮ್ ಆದ್ಮಿ ಪಕ್ಷ 10 ವರ್ಷದಲ್ಲಿ ಬಹಳಷ್ಟು ವೇಗವಾಗಿ ಬೆಳವಣಿಗೆ ಪಡೆಯುತ್ತಿದ್ದು. ಈ ವೇಗ ನೋಡಿದರೆ ಕರ್ನಾಟಕದಾದ್ಯಂತ ಮುಂದಿನ 10 ವರ್ಷದಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ ಯಾವ ಕ್ರಾಂತಿಯಾದರೂ ಒಬ್ಬರಿಂದಲೇ ಪ್ರಾರಂಭ ನಂತರ ಸಾವಿರಾರು ಜನರು ಸೇರಿ ದೇಶದಲ್ಲಿ ಮಹತ್ತರವಾದ ಬದಲಾವಣೆ ತರುವಲ್ಲಿ ಕೈ ಜೋಡಿಸುತ್ತಾರೆ ಎಂದರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಮಾತನಾಡಿ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮುಂದೊಂದು ದಿನ ಆಮ್ ಆದ್ಮಿ ಪಕ್ಷದ ಶಾಸಕನಾಗಿ ಯಾರಾದರು ಒಬ್ಬರು ಬರುತ್ತಾರೆ. ಪಕ್ಷದಲ್ಲಿ ಕಾರ್ಯಕರ್ತರು ವಿರಳ ಇರಬಹುದು, ಆದರೆ ಕರ್ನಾಟದಲ್ಲಿ ನಮ್ಮ ಪಕ್ಷ ಮುಂದೊಂದು ದಿನ ಅಧಿಕಾರ ಹಿಡಿಯುತ್ತದೆ, ಉಳ್ಳಾಲದಲ್ಲಿ ನಮ್ಮ ಪಕ್ಷ ಚಿಕ್ಕ ಮಗು ಇದಕ್ಕೆ ನೀರು ಹಾಕಿ ಬೆಳೆಸ ಬೇಕಾಗುತ್ತದೆ, ದುಷ್ಟ ರಾಜಕೀಯ ಶಕ್ತಿಗಳನ್ನು ಸದಬಡೆದು, ಜಿಲ್ಲೆಯಲ್ಲಿ 8. ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳ ವಿಜಯಕ್ಕಾಗಿ ಶ್ರಮಿಸ ಬೇಕೆಂದು ಹೇಳಿದರು. ಆಮ್ ಆದ್ಮಿ ಪಕ್ಷದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತರ ಪಕ್ಷದಿಂದ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು. ರೋನಿ ಕ್ರಾಸ್ತ ಕುಲಸೇಖರ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.