(www.vknews.in) ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಸುನ್ನಿ ಸೆಂಟರ್ ಪೆರ್ನೆ ಮತ್ತು ಟ್ಯಾಲೆಂಟ್ ರಿಸೆರ್ಚ್ ಸೆಂಟರ್ (ರಿ) ಮಂಗಳೂರು ವತಿಯಿಂದ ಪೆರ್ನೆ ಯ ಅನುದಾನಿತ ಶ್ರಿ ರಾಮಚಂದ್ರ ಪ್ರೌಡ ಶಾಲೆ ಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಒಂದು ದಿನದ ಮೋಟಿವೇಷನ್ ತರಗತಿಯನ್ನು ನಡೆಸಲಾಯಿತು. ತರಗತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ರಫೀಕ್ ಮಾಸ್ಟರ್ ನಡೆಸಿ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮನ್ವಯಾಧಿಕಾರಿ ಸುಜಾತ ರವರು ವಹಿಸಿ ಕೊಂಡಿದ್ದರ್ರು, ಕಾರ್ಯಕ್ರಮದ ಉದ್ಘಾಟನೆಯನ್ನು ಜಿ ಮಹಮ್ಮದ್ ಕಾಮಿಲ್ ಸಖಾಫಿ ಯವರು ನಿರ್ವಹಿಸಿದರು, ಟ್ಯಾಲೆಂಟ್ ರಿಸರ್ಚ್ ಸೆಂಟರ್ ಮಂಗಳೂರು ಇದರ ಕಾರ್ಯದರ್ಶಿ ಅಬ್ದುಲ್ ಹಮೀದ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ನ ಪೆರ್ನೆ ಯ ಅಧ್ಯಕ್ಷರಾದ ಹನೀಫ್ ಕಡಂಬು, ಶಫೀಕ್ ದೊರ್ಮೆ,ನಿಸಾರ್ ಬಾಣೋಟು ಉಪಸ್ಥಿತ ರಿದ್ದರು, ಕಾರ್ಯಕ್ರಮದ ನಿರ್ವಹಣೆ ಹಾಗೂ ಸ್ವಾಗತವನ್ನು ಮೊಯಿದಿನ್ ಕುಟ್ಟಿ ಎಸ್ಡಿಎಂಸಿ ಸಮನ್ವಯ ವೇದಿಕೆ ಯವರು ಮಾಡಿದರು, ಶಾಲೆಯ ಮುಖ್ಯೋಪಾಧ್ಯಾಯ ರಾದ ತಾರಾನಾಥ್ ರವರು ಧನ್ಯವಾದ ವನ್ನು ಸಮರ್ಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.