(www.vknews.in)
ಬೆಳ್ತಂಗಡಿ : SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪತ್ರಿಕಾಗೋಷ್ಠಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆಯವರ ನೇತೃತ್ವದಲ್ಲಿ ಇಂದು ಬೆಳ್ತಂಗಡಿ ಕಚೇರಿಯಲ್ಲಿ ನಡೆಯಿತು.
ಪಕ್ಷದ ರಾಜ್ಯ ಸಮಿತಿಯು ಕೈಗೊಂಡ ತೀರ್ಮಾನದಂತೆ ಜನವರಿ 21 ರಿಂದ ಜನವರಿ 31 ರವರೆಗೆ ಬೂತ್ ಜೋಡೋ ಎಂಬ ವಿಶೇಷ ಅಭಿಯಾನ ನಡೆಯಲಿದೆ, ಈ ಅವಧಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪಿಯಲ್ಲಿ ಅಭಿಯಾನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲಾಗುದು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ 81 ಗ್ರಾಮದ 241 ಬೂತ್ ಗಳಲ್ಲಿ ಈ ಅಭಿಯಾನ ನಡೆಯಲಿದೆ. ಪಕ್ಷಕ್ಕೆ ಹೊಸ ಕಾರ್ಯಕರ್ತರ ಸೇರ್ಪಡೆ ಮತ್ತು ಬೂತ್ ರಚನೆ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕರಾವಳಿಯ ಜನತೆಗೆ ವಿಶೇಷ ಘೋಷಣೆಗಳನ್ನು ಮಾಡಿದ್ದು, ಆದರೆ ಅದರಲ್ಲಿ ಮಂಗಳೂರಿನ ಬ್ಯಾರಿ ಸಮುದಾಯಕ್ಕೆ ಯಾವುದೇ ಅನುದಾನ ಆಶ್ವಾಸನೆಯನ್ನು ನೀಡಿಲ್ಲ. ಆದ್ದರಿಂದ ಬ್ಯಾರಿ ಸಮುದಾಯವು ಈ ಬಾರಿಯ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷವನ್ನು ಬೆಂಬಲಿಸಲಿದೆ. ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದ್ದು ಜನತೆಯು ಆಡಳಿತ ವಿರೋಧಿ ಬಿಜೆಪಿ ಪಕ್ಷವನ್ನು ಈ ಬಾರಿ ತಿರಸ್ಕರಿಸಲಿದ್ದಾರೆ. ಬೆಳ್ತಂಗಡಿಯ ಯುವ ಸಮುದಾಯ ಈ ಬಾರಿ ಎಸ್ಡಿಪಿಐ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಈ ಅಭಿಯಾನದ ಮೂಲಕ ಬೆಳ್ತಂಗಡಿಯಲ್ಲಿ ಎಸ್ಡಿಪಿಐ ಪಕ್ಷವು ಪ್ರತಿ ಬೂತ್ ಮಟ್ಟದಲ್ಲಿ ಬಲಿಷ್ಠವಾಗಲಿದೆ ಎಂದು ಪತ್ರಕರ್ತರನ್ನು ಉದ್ದೇಶಿಸಿ ನವಾಝ್ ಕಟ್ಟೆ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಬೆಳ್ತಂಗಡಿ ವಿಧಾನಸಭಾ ಚುನಾವಣೆ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ, ಪಕ್ಷ ಸಂಘಟನಾ ಕಾರ್ಯದರ್ಶಿಯಾಗಿ ನಿಸಾರ್ ಕುದ್ರಡ್ಕ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.