ಮಾಸ್ಕೊ (ವಿಶ್ವ ಕನ್ನಡಿಗ ನ್ಯೂಸ್) : ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ, ಗಾಮೇಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಆ್ಯಂಡ್ ಮ್ಯಾಥಮೆಟಿಕ್ಸ್ನ ಹಿರಿಯ ಸಂಶೋಧಕರಾಗಿದ್ದ, ವಿಜ್ಞಾನಿಯೋರ್ವರು ನಿಗೂಢವಾಗಿ ಹತ್ಯೆಯಾಗಿದ್ದಾರೆ. ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ 47 ವರ್ಷ ವಯಸ್ಸಿನ ವಿಜ್ಞಾನಿ ಆಂಡ್ರೆ ಬೊಟಿಕೋವ್ ಹತ್ಯೆಯಾದ ವಿಜ್ಞಾನಿ.
ಆಂಡ್ರೆ ಬೊಟಿಕೋವ್ ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನಲ್ಲಿ ಹತ್ಯೆಯಾಗಿದ್ದಾರೆ. ಬೆಲ್ಟ್ನಿಂದ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಕ್ಕಾಗಿ ಆಂಡ್ರೆ ಬೊಟಿಕೋವ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2021ರಲ್ಲಿ ‘ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್ಲ್ಯಾಂಡ್’ ಪ್ರಶಸ್ತಿ ನೀಡಿ ಗೌರವಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.