ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ನಾಲ್ವರನ್ನು ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದ ಮನೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬೈಕಂಪಾಡಿ ನಿವಾಸಿ ವಿಕ್ರಂ ಅಲಿಯಾಸ್ ಜಯರಾಂ(30), ಕೋಡಿಯಾಲ್ ಬೈಲ್ ನಿವಾಸಿ ಸತೀಶ್ (50), ಕುಳಾಯಿ ನಿವಾಸಿ ಸರ್ಫರಾಜ್ (37), ಬೈಕಂಪಾಡಿ ನಿವಾಸಿ ಅಕ್ಷಯ್ (33)ಬಂಧಿತರು. ಮಾದಕ ವಸ್ತು ಗಾಂಜಾವನ್ನು ಮಾರಾಟ ಮತ್ತು ಸೇದುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.