ಇನ್ನು ಮುಂದೆ ವಯಸ್ಕರಿಗೆ ಹಾಗೂ ಮಕ್ಕಳಿಗೆ ಒಂದೇ ಟಿಕೆಟ್ ದರ
ಜೆದ್ದಾ(www.vknews.in): ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಪ್ರಯಾಣಿಕರ ಕೆಸೆಗೆ ಕತ್ತರಿ ಹಾಕ ತೊಡಗಿದೆ . ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಕ್ಕಳ ಟಿಕೆಟ್ ಮೇಲಿನ ರಿಯಾಯಿತಿಯನ್ನು ತೆಗೆದು ಹಾಕಿ ವಯಸ್ಕರಿಗೆ ಹಾಗೂ ಮಕ್ಕಳಿಗೆ ಒಂದೇ ಟಿಕೆಟ್ ಶುಲ್ಕವನ್ನು ವಿಧಿಸುತ್ತಿದೆ. ಎಕ್ಸ್ ಪ್ರೆಸ್ ನ ಈ ಹೊಸ ನಿರ್ಧಾರವು ವಲಸಿಗರು ಸೇರಿದಂತೆ ಪ್ರಯಾಣಿಕರನ್ನು ಸಾಕಷ್ಟು ತೊಂದರೆಗೆ ಸಿಲುಕಿಸುತ್ತಿದೆ. ಇಲ್ಲಿಯವರೆಗೆ ಇದ್ದ ಮಕ್ಕಳಿಗೆ ವಿನಾಯಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಎಕ್ಸ್ ಪ್ರೆಸ್, , ವಯಸ್ಕರಿಗೆ ವಿಧಿಸುವ ಅದೇ ಶುಲ್ಕವನ್ನು ಮಕ್ಕಳಿಗೆ ವಿಧಿಸುತ್ತಿದೆ.
ಸಾಮಾನ್ಯವಾಗಿ, 2 ರಿಂದ 12 ವರ್ಷದೊಳಗಿನ ಮಕ್ಕಳ ಪ್ರಯಾಣದ ದರವು ವಯಸ್ಕರಿಗಿಂತ ಕಡಿಮೆಯಿತ್ತು. ಇದನ್ನೇ ಈಗ ಕೈಬಿಡಲಾಗಿದೆ. ಇದರೊಂದಿಗೆ, ಟಿಕೆಟ್ ಪಡೆಯಲು ಎಲ್ಲರೂ ಒಂದೇ ದರವನ್ನು ಪಾವತಿಸಬೇಕಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.