ಜೆದ್ದಾ(www.vknews.in): ಸೌದಿ ಅರೇಬಿಯಾದ ಸಾರ್ವಜನಿಕ ಆರೋಗ್ಯ ಪ್ರಾಧಿಕಾರವು ಮಾರಣಾಂತಿಕ ಮಾರ್ಬರ್ಗ್ ವೈರಸ್ ಪ್ರಕರಣಗಳು ಏಕಾಏಕಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿನಿಯಾ ಮತ್ತು ತಾಂಜೇನಿಯಾಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಜನರನ್ನು ಒತ್ತಾಯಿಸಿದೆ. ಮತ್ರವಲ್ಲ ಒಮಾನ್ ಕೂಡ ಈ ಎರಡು ರಾಷ್ಟ್ರಗಳಿಗೆ ಪ್ರಯಾಣಿಸದಂತೆ ನಾಗರೀಕರನ್ನು ಎಚ್ಚರಿಸಿದೆ. ಮಾರ್ಬರ್ಗ್ ವೈರಸ್ ಕಾಯಿಲೆ ನಿಯಂತ್ರಣಕ್ಕೆ ಬರುವವರೆಗೂ ಗಿನಿಯಾ ಮತ್ತು ತಾಂಜೇನಿಯಾಕ್ಕೆ ಪ್ರಯಾಣಿಸದಂತೆ ಈ ಎರಡೂ ಗಲ್ಫ್ ರಾಷ್ಟ್ರಗಳು ಜನರಿಗೆ ಸಲಹೆ ನೀಡಿದೆ. ಈ ಎರಡು ದೇಶಗಳಲ್ಲಿ ಇರುವವರು ಸ್ಥಳೀಯ ಆರೋಗ್ಯ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಬೇಕು ಮತ್ತು ಆರೋಗ್ಯ ಸಚಿವಾಲಯ ಮತ್ತು ವಿಖಾಯಾ ಸೂಚಿಸಿದ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಿನಿಯಾ ಮತ್ತು ತಾಂಜೇನಿಯಾದ ಆರೋಗ್ಯ ಕೇಂದ್ರಗಳು ನೀಡಿದ ಎಚ್ಚರಿಕೆಯ ಆಧಾರದ ಮೇಲೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ವಿಖಾಯಾದ ಅಧಿಕೃತ ಮೂಲಗಳು ತಿಳಿಸಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.