ಜೆದ್ದಾ(www.vknews.in): ಭಾರತದ ವಿವಿದೆಡೆಯಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಾಳಿಗಳು, ಪ್ರಾರ್ಥನಾ ಮಂದಿರಗಳ ಧ್ವಂಸ ಸೇರಿದಂತೆ ದೇಶದೆಲ್ಲೆಡೆ ನಡೆಯುತ್ತಿರುವ ಒಂದು ಸಮುದಾಯದ ವಿರುದ್ಧದ ಹಿಂಸೆಗಳನ್ನು ತಕ್ಷಣ ನಿಲ್ಲಿಸುವಂತೆಯೂ ಹಾಗೂ ದೇಶದ ವಿವಿದೆಡೆ ಹರಡುತ್ತಿರುವ ಇಸ್ಲಾಮೋಫೋಬಿಯಾಕ್ಕೆ ಕಡಿವಾಣ ಹಾಕುವಂತೆಯೂ ಆರ್ಗನೈಶೇಷನ್ ಆಫ್ ಇಸ್ಲಾಮಿಕ್ ಕೋಅಪರೇಷನ್ (ಓಐಸಿ) ಭಾರತ ಸರಕಾರವನ್ನು ಆಗ್ರಹಿಸಿದೆೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ 57 ಮುಸ್ಲಿಂ ರಾಷ್ಚ್ರಗಳ ಒಕ್ಕೂಟವಾದ ಓಐಸಿ, ಭಾರತದಲ್ಲಿ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ದಾಳಿಗಳ ಕುರಿತು ತೀವೃ ಕಳವಳ ವ್ಯಕ್ತಪಡಿಸಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.