ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಉಮ್ರಾ ಗುಂಪು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಐವರು ಭಾರತೀಯರು ಸಾವನ್ನಪ್ಪಿದ್ದಾರೆ. ರಾಜಧಾನಿ ರಿಯಾದ್ನಿಂದ ಹೊರಟಿದ್ದ ಎರಡು ಭಾರತೀಯ ಕುಟುಂಬಗಳು ಅಪಘಾತದಲ್ಲಿ ಸಿಲುಕಿವೆ. ಹೈದರಾಬಾದ್ ಮೂಲದ ಅಹ್ಮದ್ ಅಬ್ದುರ್ ರಶೀದ್ ಅವರ ಪತ್ನಿ ಖಾನ್ಸಾ, ಮೂರು ವರ್ಷದ ಮಗಳು ಮರ್ಯಮ್, ರಾಜಸ್ಥಾನ ಮೂಲದ ಮೊಹಮ್ಮದ್ ಶಾಹಿದ್ ಖತ್ರಿ, ಅವರ ಪತ್ನಿ ಸುಮಯ್ಯ ಮತ್ತು ನಾಲ್ಕು ವರ್ಷದ ಮಗ ಅಮ್ಮಾರ್ ಸಾವನ್ನಪ್ಪಿದ್ದಾರೆ. ಅಹ್ಮದ್ ಅಬ್ದುರ್ ರಶೀದ್ ಅಪಾಯದಿಂದ ಪಾರಾಗಿದ್ದಾರೆ.
ರಿಯಾದ್ನಲ್ಲಿ ಉದ್ಯೋಗಿಯಾಗಿರುವ ಅಹ್ಮದ್ ಅಬ್ದುರ್ ರಶೀದ್ (27) ಮತ್ತು ಮುಹಮ್ಮದ್ ಶಾಹಿದ್ ಖತ್ರಿ (24) ಅವರ ಕುಟುಂಬಗಳು ಅಪಘಾತದಲ್ಲಿ ಸಿಲುಕಿವೆ. ಇಬ್ಬರೂ ರಿಯಾದ್ನ ಸುವೈದಿ ಪ್ರದೇಶದಲ್ಲಿ ನೆರೆಹೊರೆಯವರು. ಗುರುವಾರ ಬೆಳಗ್ಗೆ ಇವರಿಬ್ಬರು ಪ್ರಯಾಣಿಸುತ್ತಿದ್ದ ಕಾರು ಎದುರುಗಡೆಯಿಂದ ಬಂದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.