ಸಜೀಪ (www.vknews.in) : ಸರಕಾರಿ ಪದವಿ ಪೂರ್ವ ಕಾಲೇಜು ಇದರ ಫ್ರೌಡ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಜುಲೈ ಒಂದರಂದು ಮಧ್ಯಾಹ್ನ ಸಮಯ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವ ಮಧ್ಯೆ ಶಾಲೆಯ ಸ್ವಲ್ಪ ದೂರದಲ್ಲಿ 500 ಮುಖ ಬೆಲೆಯ ನೋಟುಗಳ ಕಟ್ಟು ರಸ್ತೆಯಲ್ಲಿ ಬಿದ್ದಿದವು, ಅದರಲ್ಲಿ 18000 ರೂ ಇತ್ತು.
ಈ ಬಗ್ಗೆ ವಿಧ್ಯಾರ್ಥಿಗಳು ತಮಗೆ ಸಿಕ್ಕಿದ ಮೊತ್ತವನ್ನು ಮನೆಯಲ್ಲಿ ತಿಳಿಸಿ, ಪಾರೂಕು ಆಲಾಡಿ ಅವರ ಗಮನಕ್ಕೆ ತರುತ್ತಾರೆ, ಕ್ಷಣಾರ್ಧದಲ್ಲಿ ಪಾರೂಕು ಆಲಾಡಿ ಅವರು ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಣ ಸಿಕ್ಕಿದ ಬಗ್ಗೆ ಸುದ್ದಿ ವೈರಲ್ ಮಾಡಿದ್ದರು, ಸ್ಥಳೀಯ ವಾಟ್ಸಪ್ ಗ್ರೂಪ್ ನಲ್ಲಿ ಸುದ್ದಿ ಪ್ರಚಾರ ಪಡೆಯಿತು.
ಸುದ್ದಿ ತಿಳಿದ ಹಣ ಕಳೆದುಕೊಂಡ ಸಜೀಪ ಮೂನ್ನುರು ಶಾರದ ನಗರ ನಿವಾಸಿ ಬೀಡಿ ಉದ್ಯಮಿ ಗಂಗಯ್ಯ ಪೂಜಾರಿ ಅವರು ವಿಧ್ಯಾರ್ಥಿಗಳ ಪೋಷಕರು ಮತ್ತು ಪಾರೂಕ್ ಆಲಾಡಿ ಅವರಿಂದ 18000 ರೂ ಹಣವನ್ನು ಪಡೆದುಕೊಂಡಿದ್ದಾರೆ. ಭವಿಷ್ಯದ ವಿಧ್ಯಾರ್ಥಿಗಳ ಈ ಪ್ರಾಮಾಣಿಕತೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ, ಸಜೀಪ ಮೂಡ ಫ್ರೌಡ ಶಾಲೆಯ ವಿಧ್ಯಾರ್ಥಿಗಳು ಆಲಾಡಿ ನಿವಾಸಿಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.