(www.vknews.in) ಫಿಲೋಮಿನ ಕಾಲೇಜಿನ ಚುನಾವಣೆಯನ್ನು ಕೋಮುದ್ರುವೀಕರಣ ನಡೆಸಿದ ಪುತ್ತಿಲ ಪರಿವಾರ ಎಬಿವಿಪಿ ಸಂಘಟನೆ ಮತ್ತು ವರದಿ ಬಿತ್ತರಿಸಿದ ಸುದ್ದಿ ಬಿಡುಗಡೆ ಪತ್ರಿಕಾ ಮಾಧ್ಯಮವು ವಿದ್ಯಾರ್ಥಿಗಳಿಗೆ ಸ್ಪಷ್ಟನೆಯನ್ನು ನೀಡಬೇಕು._
_ಸೆಪ್ಟೆಂಬರ್ 9 ರಂದು ನಡೆದ ಚುನಾವಣೆಯಲ್ಲಿ ಕೋಮು ದ್ರುವೀಕರಣ ನಡೆಯುವ ಕೆಲಸವು ನಡೆದಿದೆ. ಅಲ್ಪ ಮತದ ಅಂತರದಿಂದ ವಿಜಯಿಯಾದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪುತ್ತಿಲ ಪರಿವಾರದ ಕಾರ್ಯಕರ್ತರು ಮತ್ತು ಎಬಿವಿಪಿ ಯ ಕಾರ್ಯಕರ್ತರು ಮುಗ್ದ ಮನಸ್ಸಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ತಮ್ಮ ಸಂಘಟನೆಯ ಕಾರ್ಯಕರ್ತರು ಎಂದು ಬಿಂಬಿಸಿ ಎಲ್ಲಾ ಮಾಧ್ಯಮಗಳಲ್ಲಿ ವರದಿಯನ್ನು ನೀಡಿದ್ದಾರೆ ಆದರೆ ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಕೇಳಿದರೆ ನಮಗೇನು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಫಿಲೋಮಿನ ಕಾಲೇಜಿನ ಅಧಿಕೃತರು ಮಾಧ್ಯಮಗಳಲ್ಲಿ ನೀಡಿದ ಅಧಿಕೃತ ವರದಿಯನ್ನು ಕೋಮುವಾದಿ ಪಕ್ಷ ಸಂಘಟನೆ ತಮಗೆ ಬೇಕಾದ ರೀತಿಯಲ್ಲಿ “ಎಬಿವಿಪಿ ಕಾರ್ಯಕರ್ತರು ವಿಜಯಿಶಾಲಿಯಾಗಿದ್ದಾರೆ ಎಂದು ವರದಿಯನ್ನು ರಾತ್ರೋ ರಾತ್ರಿ ತಿರುಚಿದ್ದಾರೆ” ಮತ್ತು ಫೋಟೋವನ್ನು ತಮಗೆ ಬೇಕಾದ ರೀತಿಯಲ್ಲಿ ಹಾಕಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಸುದ್ದಿ ಬಿಡುಗಡೆಯವರು ಕೂಡ ಅದನ್ನು ಹಾಕಿದ್ದಾರೆ ಈ ಮಾಹಿತಿಯನ್ನು ವಿದ್ಯಾರ್ಥಿಗಳು ಫಿಲೋಮಿನ ಕಾಲೇಜಿನ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. “ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕರು ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟನೆಯನ್ನು ತಮ್ಮ ಪತ್ರಿಕೆಯ ಮೂಲಕ ನೀಡಬೇಕು ಪತ್ರಿಕೆಯಲ್ಲಿ ತಿರುಚಿದಂತಹ ಕೋಮುವಾದಿ ಪತ್ರಕರ್ತರನ್ನು ತಕ್ಷಣ ಅಮಾನುತಗೊಳಿಸಬೇಕು ಅವರ ಮೇಲೆ ಕ್ರಮ ಜರುಗಿಸಬೇಕು. ಮತ್ತು ತಿರುಚಿದ ವರದಿಯನ್ನು ಯಾರು ನೀಡಿದ್ದಾರೆ ಎಂದು ಪತ್ರಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಚೇರಿಯ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಎದುರಿಸಬೇಕಾದಿತು.”_
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.